ನವದೆಹಲಿ: ಸುಮಾರು 8,100 ಕೋಟಿ ರೂ. ಹೂಡಿಕೆಯಲ್ಲಿ 50 ಸೌರ ಉದ್ಯಾನವನ್ನು ಸ್ಥಾಪಿಸಲು ಹಾಗೂ ಅಲ್ಟ್ರಾ ಮೆಗಾ ಸೌರ ವಿದ್ಯುತ್ ಯೋಜನೆಗಳಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಹೂಡಿಕೆ ಸೌರ ವಿದ್ಯುತ್ ಉತ್ಪಾದನೆಯನ್ನು ದುಪ್ಪಟ್ಟು ಮಾಡುವ ಮೂಲಕ 40 ಸಾವಿರ ಮೆಗಾ ವ್ಯಾಟ್ ಗುರಿ ತಲುಪಲಿದೆ ಎಂದು ಕೇಂದ್ರ ವಿದ್ಯುತ್ ಸಚಿವ ಪಿಯುಶ್ ಗೋಯಲ್ ಹೇಳಿದ್ದಾರೆ.
ಸಚಿವ ಸಂಪುಟದ ಈ ನಿರ್ಧಾರದಿಂದ ದೇಶಾದ್ಯಂತ ವಿವಿಧ ಭಾಗಗಳಲ್ಲಿ 500 ಮೆ.ವ್ಯಾ. ಸಾಮರ್ಥ್ಯದ 50 ಸೌರ ಉದ್ಯಾನವನ್ನು ಸ್ಥಾಪಿಸಲು ಸಹಾಯವಾಗಲಿದೆ ಎಂದು ಸಭೆಯ ನಂತರ ಗೋಯಲ್ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ 8,100 ಕೋಟಿ ರೂ. ಹೂಡಿಕೆಯ ನೆರವಿನಿಂದ ಸೌರ ಉದ್ಯಾನ ಹಾಗೂ ಅಲ್ಟ್ರಾ ಮೆಗಾ ಸೌರ ವಿದ್ಯುತ್ ಯೋಜನೆಗಳನ್ನು 2019-20ರ ವೇಳಗೆ ಸ್ಥಾಪಿಸಲಾಗುವುದು. ಪರ್ವತ ಶ್ರೇಣಿಗಳಿರುವ ರಾಜ್ಯಗಳಲ್ಲಿ ಸಮತಟ್ಟಾದ ಭೂಪ್ರದೇಶ ದೊರೆಯುವುದು ಕಷ್ಟವಾಗುವುದರಿಂದ ಅಲ್ಲಿ ಸಣ್ಣ ಉದ್ಯಾನಗಳನ್ನು ಸ್ಥಾಪಿಸಲಾಗುವುದು ಎಂದು ಗೋಯಲ್ ಹೇಳಿದ್ದಾರೆ.
ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಇದರ ಲಾಭವನ್ನು ಪಡೆಯಲು ಅರ್ಹರಾಗಿರುತ್ತಾರೆ. ರಾಜ್ಯ ಸರ್ಕಾರಗಳು ಮೊದಲು ಸೌರ ಶಕ್ತಿ ಉದ್ಯಾನ ಡೆಪೆಲೊಪರ್ (ಎಸ್ಪಿಪಿಡಿ)ನ ನಾಮನಿರ್ದೇಶನ ಮಾಡಿ ನಂತರ ಪ್ರಸ್ತಾಪಿತ ಯೋಜನೆಗೆ ಭೂಮಿ ಒದಗಿಸಬೇಕಿದೆ. ಎಂಎನ್ಆರ್ಇ ನಿರ್ದೇಶನದ ಅಡಿಯಲ್ಲಿ ಭಾರತೀಯ ಸೌರಶಕ್ತಿ ಕಾರ್ಪೋರೇಶನ್ ಇದರ ಮೇಲ್ವಿಚಾರಣೆ ನಡೆಸಲಿದ್ದು, ಅನುಮೋದಿತ ಅನುದಾನವನ್ನು ಬಿಡುಗಡೆ ಮಾಡಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.