ನವದೆಹಲಿ: ಬಹುವಿವಾದಿತ ತೈಮೂರ ಹೆಸರನ್ನು ಬದಲಿಸುವ ಆಲೋಚನೆ ಇದೆ ಎಂದು ಬಾಲಿವುಡ್ ನಟ ಸೈಫ್ ಅಲಿಖಾನ್ ಹೇಳಿದ್ದಾರೆ.
ದಿಲ್ಲಿ ಟೈಮ್ಸ್ಗೆ ನೀಡಿರುವ ಸಂದರ್ಶನದಲ್ಲಿ ಈ ಕುರಿತು ಹೇಳಿರುವ ಅವರು, ಸಾಕಷ್ಟು ವಿರೋಧಗಳು ಬಂದ ಹಿನ್ನೆಲೆಯಲ್ಲಿ ಮಗನ ಹೆಸರನ್ನು ಬದಲಾಯಿಸುವ ಕುರಿತು ಚಿಂತಿಸುತ್ತಿರುವೆ. ಆದರೆ ಪತ್ನಿ ಕರೀನಾ ಇದಕ್ಕೆ ಒಪ್ಪುತ್ತಿಲ್ಲ ಎಂದು ತಿಳಿಸಿದ್ದಾರೆ.
ಇತಿಹಾಸದಲ್ಲಿ ತೈಮೂರ್ ಕುರಿತು ಉಲ್ಲೇಖವಿದ್ದು ಅವನೊಬ್ಬ ಕ್ರೂರಿ, ಲಕ್ಷಾಂತರ ಹಿಂದುಗಳ ಮಾರಣ ಹೋಮ ಮಾಡಿದವ. ತೈಮೂರ್ ಮಹಿಳೆಯರ ವಿಷಯದಲ್ಲಿಯೂ ತೀರಾ ಕ್ಷುಲ್ಲಕನಾಗಿದ್ದ ಎನ್ನಲಾಗಿದೆ.
ಮಗನ ಹೆಸರನ್ನು ಬದಲಾಯಿಸುವ ಕುರಿತು ಯಾರೊಂದಿಗೂ ಮಾತನಾಡಿಲ್ಲ. ಪತ್ನಿ ಕರೀನಾ ಬಳಿ ಮಾತನಾಡಿರುವೆ. ಆದರೆ ಆಕೆ ಜನರು ನಿಮ್ಮನ್ನು ಗೌರವಿಸುತ್ತಿದ್ದಾರೆ, ಆದರೆ ನೀವೇ ಅವರನ್ನು ಗೌರವಿಸುತ್ತಿಲ್ಲ ಎಂದಿದ್ದು, ಹೆಸರಿನ ಬದಲಾವಣೆಗೆ ವಿರೋಧಿಸುತ್ತಿದ್ದಾಳೆ ಎಂದು ಸೈಫ್ ಹೇಳಿದ್ದಾರೆ.
ಜನಪ್ರಿಯವಲ್ಲದ ವ್ಯಕ್ತಿ ನನ್ನ ಮಗನಾಗುವುದು ನನಗಿಷ್ಟವಿಲ್ಲ. ಆದ್ದರಿಂದ ಹೆಸರನ್ನು ಬದಲಾಯಿಸಲು ಚಿಂತಿಸುತ್ತಿರುವೆ. ಒಂದೆರಡು ವರ್ಷಗಳಲ್ಲಿ ಈ ಕುರಿತು ನಿರ್ಣಯಿಸಲಾಗುವುದು ಎಂದು ಸೈಫ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.