ಮುಂಬಯಿ: ಮುಂಬೈ ಪೊಲೀಸರ ವಿರುದ್ಧ ತಮಾಷೆಯ ಟ್ವೀಟ್ ಮಾಡಿದ ಅಂಕಣ ಬರಹಗಾರ್ತಿ ಶೋಭಾ ಡೇ ಪೇಚಿಗೆ ಸಿಲುಗಿದ ಪ್ರಸಂಗ ನಡೆದಿದೆ.
Heavy police bandobast in Mumbai today! pic.twitter.com/sY0H3xzXl3
— Shobhaa De (@DeShobhaa) February 21, 2017
ದಢೂತಿ ಪೊಲೀಸರೊಬ್ಬರ ಚಿತ್ರವನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದೂ ಅಲ್ಲದೇ, ನಗರದಲ್ಲಿ ಭಾರೀ ಬಂದೋಬಸ್ತ್ ಎಂದು ಅಡಿ ಶೀರ್ಷಿಕೆಯನ್ನೂ ಹಾಕಿದ್ದಾರೆ. ಇದಕ್ಕೆ ಪೊಲೀಸ್ ಇಲಾಖೆಯ ಅಧಿಕೃತ ಟ್ವಿಟರ್ನಿಂದ ತಕ್ಷಣವೇ ಪ್ರತಿಕ್ರಿಯೆ ಬಂದಿದೆ.
’ನಾವು ತಮಾಷೆಯನ್ನು ಇಷ್ಟಪಡುತ್ತೇವೆ. ಆದರೆ ಈ ರೀತಿ ನೀವು ಮಾಡಿದ್ದು ತಪ್ಪು. ಜವಾಬ್ದಾರಿಯುತ ಸ್ಥಾನದಲ್ಲಿರುವ ನಿಮ್ಮಿಂದ ನಾವು ಉತ್ತಮವಾದುದನ್ನು ನಿರೀಕ್ಷಿಸುತ್ತೇವೆ’ ಎಂದು ಡೇ ಅವರ ಟ್ವೀಟ್ಗೆ ಪ್ರತಿಕ್ರಿಯಿಸಲಾಗಿದೆ.
ಶೋಭಾ ಡೇ ಅವರ ಟ್ವೀಟ್ ಇದೀಗ ವೈರಲ್ ಆಗಿದ್ದು, ಇದಕ್ಕೆ ವಿರೋಧಗಳೂ ವ್ಯಕ್ತವಾಗಿವೆ. ಏನೋ ಮಾಡಲು ಹೋಗಿ ಏನೋ ಆದ ಶೋಭಾ ಡೇ ಅವರ day ಸರಿ ಇರಲಿಲ್ಲ ಅನಿಸುತ್ತೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.