ಮುಂಬೈ: ಮೈಕ್ರೋಸಾಫ್ಟ್ ಕಂಪೆನಿ ಭಾರತಕ್ಕಾಗಿ ಸಿದ್ಧಪಡಿಸಿರುವ ’ಸ್ಕೈಪ್ ಲೈಟ್’, ’ಲಿಂಕ್ಡ್ಇನ್ ಲೈಟ್’ ಮತ್ತು ’ಸಂಗಮ’ ಎನ್ನುವ ವಿಶೇಷ ಆ್ಯಪ್ಗಳನ್ನು ಬಿಡುಗಡೆ ಮಾಡಿದೆ.
ಸ್ಕೈಪ್ ಲೈಟ್ ಆ್ಯಪ್ನ ಸಹಾಯದಿಂದ ಕಡಿಮೆ ನೆಟ್ವರ್ಕ್ ಇರುವ ಸ್ಥಳಗಳಿಂದಲೂ ತಡೆರಹಿತ ಮೆಸೇಜಿಂಗ್, ಆಡಿಯೋ ಮತ್ತು ವಿಡೀಯೋ ಕರೆಗಳನ್ನು ಮಾಡಬಹುದಾಗಿದೆ. ’ಕೇವಲ 13ಎಮ್ಬಿ ಇರುವ ಈ ಆ್ಯಪ್ ಸದ್ಯಕ್ಕೆ ಆಂಡ್ರಾಯಿಡ್ ಫೋನ್ಗಳ ಗೂಗಲ್ ಪ್ಲೇ ಸ್ಟೋರ್ನಲ್ಲಿ ಲಭ್ಯವಿದ್ದು, ವಿಶೇಷವಾಗಿ ಡಾಟಾ ಉಳಿತಾಯಕ್ಕೆಂದು ವಿನ್ಯಾಸಗೊಳಿಸಲಾಗಿದೆ’ ಎಂದು ಮೈಕ್ರೋಸಾಫ್ಟ್ ಸಿಇಓ ಸತ್ಯಾ ನಡೆಲ್ಲಾ ಕಂಪೆನಿಯ ’ಫ್ಯೂಚರ್ ಡಿಕೋಡೆಡ್’ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಕಡಿಮೆ ಗಾತ್ರದ ಈ ಅಪ್ಲಿಕೇಶನ್ ಗುಜರಾತಿ, ಬಂಗಾಳಿ, ಹಿಂದಿ, ಮರಾಠಿ, ತಮಿಳು ಮತ್ತು ತೆಲಗು ಭಾಷೆಗಳೂ ಸೇರಿದಂತೆ ಭಾರತದ ಭಾಷೆಗಳಿಗೆ ಸಪೋರ್ಟ್ ನೀಡುತ್ತದೆ.
’ಸ್ಕೈಪ್ ಲೈಟ್’ ಆ್ಯಪ್ ಬಳಕೆಗೆ ಸುಲಭವಾಗಿದ್ದು, ಮೊಬೈಲ್ ಮತ್ತು ವೈಫೈಗಳಿಂದ ಎಷ್ಟೆಲ್ಲಾ ಡಾಟಾ ಬಳಕೆಯಾಗಿದೆ ಎಂಬುದರ ಬಗ್ಗೆ ಬಳಕೆದಾರರಿಗೆ ಮಾಹಿತಿ ನೀಡುತ್ತದೆ.
ಹಲವು ವಿಶೇಷ ವೈಶಿಷ್ಟತೆಗಳನ್ನು ಹೊಂದಿರುವ ಈ ಆ್ಯಪ್, ಬಳಕೆದಾರರ ಮಲ್ಟಿಮೀಡಿಯಾ ಸಂದೇಶಗಳನ್ನು ಡೌನ್ಲೋಡ್ ಮಾಡದೆಯೇ ಬೇರೆಯವರೊಂದಿಗೆ ಹಂಚಿಕೊಳ್ಳಬಹುದು.
ಮೈಕ್ರೋಸಾಫ್ಟ್ ಸ್ವಾಧೀನದ ಉದ್ಯೋಗ ಆಧಾರಿತ ಸಾಮಾಜಿಕ ಮಾಧ್ಯಮವಾದ ಲಿಂಕ್ಡ್ಇನ್ ಆ್ಯಪ್ನ ಲೈಟ್ ಆವೃತ್ತಿ(ವರ್ಶನ್) ಕೂಡಾ ಬಿಡುಗಡೆಯಾಗಿದೆ. ಕಡಿಮೆ ಸಂಪರ್ಕವಿರುವ ಪ್ರದೇಶದಲ್ಲಿರುವ ಜನರಿಗೆ ಆರ್ಥಿಕ ಅವಕಾಶಗಳನ್ನು ಹುಡುಕಲು ಈ ಆಪ್ ಸಹಾಯಕವಾಗಲಿದೆ. ಇತರ ಹೊಸ ಆಪ್ಗಳು ಕಾಲೇಜ್ ಪದವಿ ಹೊಂದಿರುವವರಿಗೆ ಉದ್ಯೋಗಗಳನ್ನು ಪಡೆಯಲು ಸಹಾಯವಾಗಲಿವೆ ಎಂದು ಸತ್ಯಾ ನಡೆಲ್ಲಾ ಹೇಳಿದ್ದಾರೆ.
’ಸಂಗಮ’ ಎನ್ನುವ ಯೋಜನೆಯ ಬಗ್ಗೆ ಮಾತನಾಡಿದ ಸಿಇಓ ನಡೆಲ್ಲಾ, ಇದೊಂದು ಕೌಶಲ್ಯ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಹೇಳಿದ್ದಾರೆ. ಇದರಿಂದ ಕೆಲಸಕ್ಕೆ ಅರ್ಜಿ ಸಲ್ಲಿಸುವ ಜನರು ಹೊಸ ಕೌಶಲ್ಯಗಳನ್ನು ಕಲಿಯಬಹುದು. ’ಸಂಗಮ’ ಯೋಜನೆಯು ಮುಕ್ತ ವೇದಿಕೆಯಾಗಿದ್ದು ತರಬೇತುದಾರರು ಅವರ ವಿಷಯವನ್ನು ಹಾಕಬಹುದು ಮತ್ತು ಜನ ಅದರ ಸಹಾಯದಿಂದ ಕಲಿತು ಉದ್ಯೋಗಗಳಿಗೆ ಅರ್ಜಿ ಸಲ್ಲಿಸಬಹುದು.
ಈ ಸೇವೆಯನ್ನು ಮೈಕ್ರೋಸಾಫ್ಟ್ನ ಆಧಾರ್ ಪ್ರಣಾಮ ಸೇವೆಯಿಂದ ಲಾಗಿನ್ ಆಗಿ ಪ್ರಾರಂಭಿಸಬೇಕು. ನಂತರ ಬಳಕೆದಾರ ಲಿಂಕ್ಡ್ಇನ್ ಖಾತೆ ಪ್ರಾರಂಭಿಸಿ, ಕೌಶಲ್ಯ ತರಬೇತಿಯ ಕೋರ್ಸ್ಗಳಿಗೆ ತಮ್ಮ ಹೆಸರನ್ನು ನೋಂದಾಯಿಸಕೊಳ್ಳಬಹುದು. ಆಫ್ಲೈನನಲ್ಲಿ ಪಾಠಗಳನ್ನು ನೋಡಿ ಕಲಿಯಲು ಮೊದಲು ಡೌನಲೋಡ್ ಮಾಡಿರಬೇಕು. ಕೋರ್ಸ್ಗಳು ಮುಗಿಯುತ್ತಿದ್ದಂತೆ ಉದ್ಯೋಗಾವಕಾಶ, ಸಂಬಳ ಮತ್ತು ಸ್ಥಳಗಳನ್ನೂ ಹೊಂದಿಸಿ ಶಿಫಾರಸ್ಸು ಮಾಡಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.