ಪ್ಯಾರಿಸ್: ದಿನದಿಂದ ದಿನಕ್ಕೆ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚುತ್ತಿವೆ. ಕೇವಲ, ಗನ್, ಪೆನ್ಗಳಿಂದ ಮಾತ್ರವಲ್ಲದೇ, ಸೈಬರ್ ಕ್ಷೇತ್ರದಲ್ಲೂ ಉಗ್ರರ ಚಟುವಟಿಕೆ ನಿರಂತರವಾಗಿದೆ. ಇದರೊಂದಿಗೆ ಇದೀಗ ಡ್ರೋಣ್ಗಳ ಬಳಕೆ ಮೂಲಕ ದಾಳಿ ನಡೆಸುವುದು ಸಾಗಿದೆ. ಇದಕ್ಕೆ ಪ್ರತಿಯಾಗಿ ಫ್ರಾನ್ಸ್ ಹದ್ದುಗಳಿಗೆ ಮೊರೆ ಹೋಗಿದೆ.
ಡ್ರೋಣ್ ಹಾವಳಿ ತಪ್ಪಿಸಲು ಮಾಸ್ಟರ್ ಪ್ಲಾನ್ ರೂಪಿಸಿರುವ ಫ್ರಾನ್ಸ್, ಉಗ್ರರ ಡ್ರೋಣ್ ಗಳನ್ನು ಹತ್ತಿಕ್ಕಲು ತನ್ನದೇ ಆದ ಹದ್ದುಗಳ ಪಡೆಯನ್ನೇ ಸಿದ್ಧಪಡಿಸಿಕೊಂಡಿದೆ. ಉಗ್ರರ ಡ್ರೋಣ್ಗಳನ್ನು ಬೆನ್ನಟ್ಟಿ ನಾಶಪಡಿಸುವ ಕಲೆಯನ್ನು ಹದ್ದುಗಳಿಗೆ ಕರಗತ ಮಾಡಿಸಲಾಗುತ್ತದೆ. ಸೇನೆಯಲ್ಲಿ ವಿಶೇಷ ತರಬೇತಿಯನ್ನು ನೀಡಲಾಗುತ್ತಿದೆಯಂತೆ.
ಕಾರ್ಯಕ್ಷೇತ್ರವನ್ನು ಇಲ್ಲಿ ನಿಗದಿ ಮಾಡಲಾಗಿದೆ. ತನಗೆ ನೀಡಿದ ವ್ಯಾಪ್ತಿಯಲ್ಲಿ ಬೀಸುವ ಗಾಳಿಯಲ್ಲಿ ಬರುವ ಯಾವುದೇ ಸಂಶಯಾಸ್ಪದ ವಸ್ತುಗಳನ್ನು ಈ ಹದ್ದುಗಳು ಗುರುತಿಸಿ ಅವುಗಳ ಮೇಲೆ ದಾಳಿ ಮಾಡುತ್ತವೆ.
ಕೇವಲ 20 ಸೆಕೆಂಡ್ ಗಳಲ್ಲಿ 200 ಮೀಟರ್ ವ್ಯಾಪ್ತಿಯಲ್ಲಿ ಸಂಚರಿಸುತ್ತವೆಯಂತೆ. ಅಲ್ಲಿ ಉಗ್ರರ ಡ್ರೋಣ್ ಗಳು ಕಂಡುಬಂದರೆ ತಕ್ಷಣವೇ ಅವುಗಳ ಮೇಲೆ ದಾಳಿ ಮಾಡಿ ನೆಲಕ್ಕೆ ಕೆಡವಿ ಅದರಲ್ಲಿನ ಶೆಲ್ ಕಿತ್ತೆಸೆಯುವ ಸಾಹಸ ಮೆರೆಯುತ್ತವಂತೆ.
ಫ್ರಾನ್ಸ್ ಸೇನೆ ಬಳಿ ಇಂತಹ ನಾಲ್ಕು ನಿಪುಣ ಹದ್ದುಗಳಿದ್ದು, ಅವುಗಳಿಗೆ ಅ ಆರ್ಟ್ಗನ್, ಅಥೋಸ್, ಪೋರ್ತೋಸ್ ಮತ್ತು ಅರಮಿಸ್ ಎಂದು ನಾಮಕರಣ ಮಾಡಲಾಗಿದೆ. ಈಗಾಗಲೇ ಈ ಹದ್ದುಗಳ ಸಾಕಷ್ಟು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದು, ಹತ್ತಕ್ಕೂ ಹೆಚ್ಚು ಡ್ರೋಣ್ ಗಳನ್ನು ನಾಶಪಡಿಸಿವೆಯಂತೆ. ಇನ್ನು ಈ ನಾಲ್ಕು ಹದ್ದುಗಳು ಮಾತ್ರವಲ್ಲದೇ ಇನ್ನೂ ಹಲವು ಹದ್ದುಗಳು ತರಬೇತಿ ಪಡೆಯುತ್ತಿವೆ ಎಂದು ಸೇನಾ ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.