ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಫೇಸ್ಬುಕ್ನಲ್ಲಿ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿದ ವಿಶ್ವ ನಾಯಕ ಎಂದು ‘ಫೇಸ್ಬುಕ್ನ ವಿಶ್ವ ನಾಯಕರು’ 2017ರ ಅಧ್ಯಯನ ತಿಳಿಸಿದೆ.
ಸಂವಹನ ಮತ್ತು ಜಾಗತಿಕ ಸಂಪರ್ಕಗಳ ಸಂಸ್ಥೆ ಬರ್ಸನ್-ಮಾಸ್ಟೆಲ್ಲರ್ ಈ ಅಧ್ಯಯನ ನಡೆಸಿತ್ತು.
ಅಲ್ಲದೇ ಪ್ರಧಾನಿ ಮೋದಿ ಅವರು ಫೇಸ್ಬುಕ್ನಲ್ಲಿ ಅತ್ಯಂತ ಹೆಚ್ಚು ಪ್ರತಿಕ್ರಿಯೆ (ಲೈಕ್, ಕಾಮೆಂಟ್, ಶೇರ್ಸ್)ಗಳನ್ನು ಪಡೆದ ಏಕೈಕ ವಿಶ್ವ ನಾಯಕರಾಗಿದ್ದಾರೆ.
ಅವರು ಫೆಬ್ರವರಿ 1, 2017ರ ವೇಳೆಗೆ 169 ಮಿಲಿಯನ್ ಪ್ರತಿಕ್ರಿಯೆಗಳನ್ನು ಪಡೆದಿದ್ದಾರೆ.
ಕಾಂಬೋಡಿಯಾ ಪ್ರಧಾನಿ ಸಾಂಡೆಕ್ ಹುನ್ ಸೆನ್ 58 ಮಿಲಿಯನ್ ಪ್ರತಿಕ್ರಿಯೆಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.
ಅಮೇರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಇತ್ತೀಚಿನವರೆಗೆ ಫೇಸ್ಬುಕ್ನಲ್ಲಿ ಅತಿ ಹೆಚ್ಚು (52 ಮಿಲಿಯನ್) ಹಿಂಬಾಲಕರನ್ನು ಹೊಂದಿದ ವಿಶ್ವ ನಾಯಕರಾಗಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.