ನವದೆಹಲಿ: ಶೀಘ್ರದಲ್ಲೇ ಬ್ಯಾಂಕ್ ಖಾತೆ ಹೊಂದಿರದ ನಾಗರಿಕರು ಹಣವನ್ನು ಕಳುಹಿಸಲು ಹಾಗೂ ಸ್ವೀಕರಿಸಲು ತಮ್ಮ ಆಧಾರ್ ಕಾರ್ಡ್ಗಳನ್ನು ಬಳಸಬಹುದು.
ಇಂಡಿಯಾ ಪೋಸ್ಟ್ ಸದ್ಯದಲ್ಲೇ ತನ್ನ ಪಾವತಿ ಬ್ಯಾಂಕ್ ಆರಂಭಿಸಲಿದ್ದು, ಅನಂತರ ಈ ವ್ಯವಸ್ಥೆ ಜಾರಿಗೆ ಬರಲಿದೆ. 112 ಕೋಟಿಗೂ ಹೆಚ್ಚು ಭಾರತೀಯರು ಆಧಾರ್ ಸಂಖ್ಯೆಯನ್ನು ಬಳಸಿ ಹಣವನ್ನು ಕಳುಹಿಸಲು ಮತ್ತು ಸ್ವೀಕರಿಸಲು ಸಾಧ್ಯವಾಗಲಿದೆ.
ಪಾವತಿ ಬ್ಯಾಂಕ್ ಆರಂಭಿಕ ಹಂತದಲ್ಲಿ ಭಾರತದಾದ್ಯಂತ ೬೫೦ ಜಿಲ್ಲೆಗಳನ್ನು ಕ್ರಮಿಸಲಿದೆ. ಬ್ಯಾಂಕ್ ಖಾತೆ ಜೊತೆಗೆ ಅಥವಾ ಬ್ಯಾಂಕ್ ಖಾತೆ ಇಲ್ಲದೇ ಆಧಾರ್ ಸಂಖ್ಯೆಯನ್ನು ಬಳಸಿ ಪಾವತಿ ವ್ಯವಸ್ಥೆಯನ್ನು ಜಾರಿಗೆ ತರುವಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದು ಇಂಡಿಯಾ ಪೋಸ್ಟ್ ಸಿಇಒ ಎ.ಪಿ. ಸಿಂಗ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.