ನವದೆಹಲಿ: ವಿಶ್ವದಾದ್ಯಂತ ಜನರು ಅಭೂತಪೂರ್ವ ಮಟ್ಟದಲ್ಲಿ ರಿಲಯನ್ಸ್ ಜಿಯೋವನ್ನು ಸ್ವೀಕರಿಸಿದ್ದು, 170 ದಿನದಲ್ಲಿ ಇದರ ಗ್ರಾಹಕರ ಸಂಖ್ಯೆ 100 ಮಿಲಿಯನ್ ದಾಟಿದೆ. ಮೊದಲ 100 ಮಿಲಿನ್ ಗ್ರಾಹಕರು ತೋರಿದ ಪ್ರೀತಿಯಿಂದ ಜಿಯೋ ಇಂದು ಅಪಾರ ಎತ್ತರಕ್ಕೆ ಸಾಗಿದೆ ಎಂದು ರಿಲಯನ್ಸ್ ಸಂಸ್ಥೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಹೇಳಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಜಿಯೋ ಗ್ರಾಹಕರಿಂದ 100 ಕೋಟಿ ಗಿಗಾಬೈಟ್ ಡಾಟಾ ಬಳಕೆಯಾಗಿದೆ. ಭಾರತ ವಿಶ್ವದಲ್ಲೇ ನಂ.1 ಡಾಟಾ ಬಳಕೆದಾರ ದೇಶವಾಗಿದೆ ಎಂದು ಅವರು ಹೇಳಿದ್ದಾರೆ.
ಇದೇ ವೇಳೆ ರಿಲಯನ್ಸ್ ಜಿಯೋ ಕುರಿತು ಹೇಳಿದ ಅವರು, ಜಿಯೋ ಮುಂದಿನ ದಿನಗಳಲ್ಲಿ ಡಾಟಾ ಸಾಮರ್ಥ್ಯವನ್ನು ದುಪ್ಪಟ್ಟು ಮಾಡಲಿದೆ ಎಂದು ಹೇಳಿದ್ದಾರೆ.
ಮಾರ್ಚ್ 31ರ ಒಳಗೆ ಜಿಯೋ ಸೇವೆಗಳನ್ನು ಹೊಂದಿದ ಎಲ್ಲ ಗ್ರಾಹಕರಿಗೆ ರೂ.99ರ ಜಿಯೋ ಪ್ರೈಂ ಸದಸ್ಯತ್ವ ಯೋಜನೆಯನ್ನು ಘೋಷಿಸಿದ್ದಾರೆ.
ಜಿಯೋ ಪ್ರೈಂ ಸದಸ್ಯತ್ವ ಪಡೆದ ಗ್ರಾಹಕರು ಮುಂದಿನ 12 ತಿಂಗಳು ಅಂದರೆ ಮಾರ್ಚ್ 31, 2018ರ ವರೆಗೆ ಉಚಿತ ವಾಯ್ಸ್ ಕರೆಗಳು ಮತ್ತು 303 ರೂ.ಗೆ ಡಾಟಾ ಸೇವೆಗಳನ್ನು ಪಡೆಯಲಿದ್ದಾರೆ ಎಂದು ಹೇಳಿದ್ದಾರೆ.
ಮಾರ್ಚ್ 31, 2017ಕ್ಕೆ ಆರಂಭಿಕ ಪ್ರೋಮೋ ಆಫರ್ ಕೊನೆಗೊಳ್ಳಲಿದೆ. ಜಿಯೋ ಪ್ರೈಂ ಮೆಂಬರ್ಶಿಪ್ (ಸದಸ್ಯತ್ವ) ಪಡೆದ ಗ್ರಾಹಕರು ತಮ್ಮ ನ್ಯೂ ಇಯರ್ ಪ್ಲಾನ್ ಮುಂದುವರೆಸಬಹುದಾಗಿದೆ ಎಂದು ಮುಖೇಶ್ ಅಂಬಾನಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.