ಶ್ರೀನಗರ: ಒಂದು ಅನಿರೀಕ್ಷಿತ ನಡೆಯಂತೆ ಜಮ್ಮು ಮತ್ತು ಕಾಶ್ಮೀರದ ಮೆಹ್ಬೂಬ ಮುಫ್ತಿ ನೇತೃತ್ವದ ಸರ್ಕಾರ ಸರ್ಕಾರ ಹಾಗೂ ವ್ಯಕ್ತಿಗಳು ಸಮಾರಂಭಗಳಲ್ಲಿ ಲೌಡ್ ಸ್ಪೀಕರ್ಗಳನ್ನು ಬಳಸುವುದು ಹಾಗೂ ಪಟಾಕಿಗಳನ್ನು ನಿಷೇಧಿಸಿದೆ. ಇದಲ್ಲದೇ ಜನರು ಆಹ್ವಾನ ಪತ್ರಗಳ ಜೊತೆ ಡ್ರೈ ಫ್ರೂಟ್ಸ್ ಮತ್ತು ಸಿಹಿ ತಿಂಡಿಗಳನ್ನು ಕಳುಹಿಸುವುದನ್ನು ಸರ್ಕಾರ ನಿಷೇಧಿಸಿದೆ.
ಮಗನ ಮದುವೆ 400 ಜನರು, ಮಗಳ ಮದುವೆಗೆ 500 ಜನರು ಹಾಗೂ ನಿಶ್ಚಿತಾರ್ಥ ಅಥವಾ ಸಣ್ಣ ಪುಟ್ಟ ಸಮಾರಂಭಗಳಿಗೆ ಕೇವಲ 100 ಜನರನ್ನು ಮಾತ್ರ ಆಹ್ವಾನಿಸಬಹುದು.
ಈ ನಿಯಮ ಎಪ್ರಿಲ್ 1 ರಿಂದ ಅನ್ವಯವಾಗಲಿದೆ.
ಸಾಮಾಜಿಕ, ಸರ್ಕಾರಿ ಮತ್ತು ಖಾಸಗಿ ಸಮಾರಂಭಗಳಲ್ಲಿ ಅಗತ್ಯ ಪದಾರ್ಥಗಳ ದುರ್ಬಳಕೆ ವಿರುದ್ಧ ನಿರ್ಬಂಧಗಳನ್ನು ಹೇರಲಾಗಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವ ಚೌಧರಿ ಜುಲ್ಫಿಕರ್ ಅಲಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.