ನವದೆಹಲಿ : ಡಿಜಿಟಲ್ ವ್ಯವಹಾರವನ್ನು ಉತ್ತೇಜಿಸುವ ಕ್ರಮವಾಗಿ ನೀತಿ ಆಯೋಗ 58 ದಿನಗಳ ಹಿಂದೆ ಜಾರಿಗೊಳಿಸಿದ ಎರಡು ಯೋಜನೆಗಳಾದ ಲಕ್ಕಿ ಗ್ರಾಹಕ್ ಯೋಜನಾ ಮತ್ತು ಡಿಜಿ ಧನ್ ವ್ಯಾಪಾರ ಯೋಜನೆಗಳಿಗೆ ಸಾರ್ವಜನಿಕ ವಲಯಗಳಿಂದ ಸಾಕಷ್ಟು ಉತ್ತಮ ಹಾಗೂ ಪ್ರೋತ್ಸಾಹದಾಯಕ ಪ್ರತಿಕ್ರಿಯೆ ದೊರೆತಿದೆ.
ಡಿಜಿಟಲ್ ಪಾವತಿ ವ್ಯವಹಾರವನ್ನು ದೊಡ್ಡ ರೀತಿಯಲ್ಲಿ ಪ್ರಾರಂಭಿಸಿ, ಮುನ್ನಡೆಸುವ ಗುರಿಯನ್ನು ಹೊಂದಿರುವ ಈ ಯೋಜನೆಗಳಿಗೆ ದೇಶದಾದ್ಯಂತ ಜನರು ಡಿಜಿಟಲ್ ವಹಿವಾಟಿನ್ನು ಅಳವಡಿಸಿಕೊಳ್ಳುವ ಬೆಂಬಲ ನೀಡುತ್ತಿರುವುದು ಪ್ರಶಂಸನೀಯ.
ನ್ಯಾಶನಲ್ ಪೇಮೆಂಟ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ, ಈ ಯೋಜನೆಗಳ ಅಡಿಯಲ್ಲಿ 20 ಫೆಬ್ರವರಿ 2017ರ ವರೆಗೆ ಸುಮಾರು 10 ಲಕ್ಷ ಗ್ರಾಹಕರು ಮತ್ತು ವ್ಯಾಪಾರಿಗಳಿಗೆ ರೂ. 153.5 ಕೋಟಿಗಿಂತಲೂ ಹೆಚ್ಚು ಹಣವನ್ನು ಪ್ರತಿಫಲ ಬಹುಮಾನವಾಗಿ ಪಾವತಿಸಲಾಗಿದೆ ಎಂದು ಹೇಳಿದೆ.
- 9.8 ಲಕ್ಷ ವಿಜೇತರಲ್ಲಿ 9.2 ಲಕ್ಷ ಗ್ರಾಹಕರು ಮತ್ತು 56,000 ವ್ಯಾಪಾರಿಗಳಾಗಿದ್ದಾರೆ.
- 120 ಗ್ರಾಹಕರು 1 ಲಕ್ಷ ರೂಪಾಯಿ (ವೈಯಕ್ತಿಕ) ಮತ್ತು 4,000 ವರ್ತಕರು 50,000 ರೂಪಾಯಿ (ವೈಯಕ್ತಿಕ) ಮೌಲ್ಯದ ಬಹುಮಾನವನ್ನು ಗೆದ್ದಿದ್ದಾರೆ.
- ಮಹಾರಾಷ್ಟ್ರ, ತಮಿಳನಾಡು, ಉತ್ತರಪ್ರದೇಶ, ಆಂಧ್ರಪ್ರದೇಶ ಮತ್ತು ದೆಹಲಿ ಈ 5 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಂದ ಗರಿಷ್ಠ ವಿಜೇತರು ಆಗಿದ್ದಾರೆ.
- ಬಹುತೇಕ ವಿಜೇತರು 21 ರಿಂದ 30 ವಯಸ್ಸಿನವರಾಗಿದ್ದಾರೆ, 60 ವರ್ಷದವರೂ ಕೂಡ ಸಕ್ರಿಯವಾಗಿ ಭಾಗಿಯಾಗಿರುವುದು ಗಮನಾರ್ಹವಾಗಿದೆ.
ಪ್ರತೀ ವಿಜೇತರರೂ ಡಿಜಿಟಲ್ ಪಾವತಿಗೆ ಸ್ವಿಚ್ ಆಗಿರುವುದು ಹೇಗೆ ಎಂಬುದಕ್ಕೆ ತಮ್ಮದೇ ಆದ ಕಥೆಗಳಿವೆ ಎಂದು ಹೇಳುತ್ತಾರೆ. ಪ್ರತಿ ರಾಜ್ಯದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಿಜೇತರು ಇರುವುದು ಡಿಜಿಟಲ್ ವ್ಯವಹಾರ ಬಹುಮಾನದ ಅಂಕಿ-ಅಂಶಗಳ ಪ್ರಕಾರ ತಿಳಿದು ಬರುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.