ನವದೆಹಲಿ: ಭಾರತ ಕಳೆದ 5 ವರ್ಷಗಳಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಶಸ್ತ್ರಾಸ್ತ್ರಗಳನ್ನು ಆಮದು ಮಾಡಿದ ದೇಶ ಮತ್ತು ಇದರ ಸಾಗರೋತ್ತರ ಶಸ್ತ್ರಾಸ್ತ್ರ ಸಂಗ್ರಹ ಚೀನಾ ಹಾಗೂ ಪಾಕಿಸ್ಥಾನಕ್ಕಿಂತ ಹೆಚ್ಚಾಗಿದೆ ಎಂದು ಸ್ಟಾಕ್ಹೋಮ್ ಮೂಲದ ಚಿಂತಕರು ತಿಳಿಸಿದ್ದಾರೆ.
ಸ್ಟಾಕ್ಹೋಮ್ ಇಂಟರ್ನ್ಯಾಶನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ (ಸಿಪ್ರಿ) ಪ್ರಕಾರ, ಭಾರತ 2012ರಿಂದ 2016ರ ನಡುವೆ ಶೇ.13ರಷ್ಟು ಜಾಗತಿಕ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿದ್ದು, ಇದು ವಿಶ್ವದ ಯಾವುದೇ ರಾಷ್ಟ್ರಕ್ಕಿಂತ ಅಧಿಕವಾಗಿದೆ.
ಭಾರತ 2007ರಿಂದ 2011 ಮತ್ತು 2012ರಿಂದ 2016ರ ಮಧ್ಯೆ ಶಸ್ತ್ರಾಸ್ತ್ರಗಳ ಆಮದು ಶೇ.43ರಷ್ಟು ಏರಿಕೆ ಮಾಡಿತ್ತು. ಜೊತೆಗೆ ಕಳೆದ ನಾಲ್ಕು ವರ್ಷದಲ್ಲಿ ಇದರ ಜಾಗತಿಕ ಶಸ್ತ್ರಾಸ್ತ್ರಗಳ ಸಂಗ್ರಹ ಪ್ರತಿಸ್ಪರ್ಧಿ ಚೀನಾ ಮತ್ತು ಪಾಕಿಸ್ಥಾನಕ್ಕಿಂತ ಹೆಚ್ಚಿದೆ ಎಂದು ಸಿಪ್ರಿ ತಿಳಿಸಿದೆ.
ಕಳೆದ 5 ವರ್ಷಗಳಲ್ಲಿ ವಿಶ್ವದಾದ್ಯಂತ ಪ್ರಮುಖ ಶಸ್ತ್ರಾಸ್ತ್ರಗಳ ವ್ಯಾಪಾರದಲ್ಲಿ ಭಾರೀ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.
ಸೌದಿ ಅರೇಬಿಯಾ ಎರಡನೇ ಅತಿ ಹೆಚ್ಚು ಶಸ್ತ್ರಾಸ್ತ್ರ ಆಮದು ಮಾಡುವ ರಾಷ್ಟ್ರವಾಗಿದ್ದು, ಶಸ್ತ್ರಾಸ್ತ್ರಗಳ ಆಮದು 2012ರಿಂದ 2016ರ ನಡುವೆ ಶೇ. 212ರಷ್ಟು ಹೆಚ್ಚಿದೆ ಎಂದು ವರದಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.