ನವದೆಹಲಿ: ತಾಯಿ ಮತ್ತು ಆಕೆಯ ಮೊದಲ ಮಗುವಿಗೆ ಮಾತ್ರ ಮಾತೃತ್ವದ ಲಾಭವನನ್ನು ನಿರ್ಬಂಧಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ.
ಈ ವರ್ಷಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹೆರಿಗೆ ಲಾಭ ಯೋಜನೆಯಡಿ ದೇಶಾದ್ಯಂತ ಗರ್ಭಿಣಿ ಸ್ತ್ರೀಯರಿಗೆ 6000 ರೂ. ನೀಡಲಾಗುವುದು ಎಂದು ಘೋಷಿಸಿದ್ದರು. ಆದರೆ ಇತ್ತೀಚೆಗಿನ ಬೆಳವಣಿಗೆಯಂತೆ ಈ ಯೋಜನೆಯಡಿ ಮೊದಲ ಬಾರಿ ಗರ್ಭಿಣಿಯಾದ ತಾಯಂದಿರು ಮಾತ್ರ ಈ ಲಾಭ ಪಡೆಯಲಿದ್ದಾರೆ.
ಆದರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಎರಡನೇ ಮತ್ತು ಮೂರನೇ ಬಾರಿ ಗರ್ಭಿಯಾದ ತಾಯಂದಿರಿಗೆ ಹಣಕಾಸಿನ ನೆರವು ಒದಗಿಸುವುದು ಅಸಾಧ್ಯ ಎಂದು ಮನಗಂಡಿದೆ.
ಎರಡನೇ ಬಾರಿ ಗರ್ಭಿಣಿಯಾದ ತಾಯಂದಿರು ತಮ್ಮ ಮೊದಲ ಮಗುವಿನ ಪೋಷಣೆ ಮಾಡುವ ಅಗತ್ಯವಿದ್ದು, ಹೆಚ್ಚಿನ ಆರ್ಥಿಕ ನೆರವು ಹಾಗೂ ಪ್ರಸೂತಿ ಲಾಭಗಳ ಅಗತ್ಯವಿದೆ. ಇದರಿಂದ ಅವರ ಒಟ್ಟಾರೆ ಖರ್ಚು ಹೆಚ್ಚುವುದರಿಂದ ಅದನ್ನು ಭರಿಸಲು ನೆರವು ಒದಗಿಸಲು ಅಸಾಧ್ಯ ಎಂದು ಸಚಿವಾಲಯ ಅಭಿಪ್ರಾಯಪಟ್ಟಿದೆ.
ಈ ವರ್ಷದ ಬಜೆಟ್ ಹಂಚಿಕೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಯಲಕ್ಕೆ ಕೇವಲ ಶೇ.1ರಷ್ಟು ಬಜೆಟ್ ಹಂಚಿಕೆ ಮೀಸಲಿಡಲಾಗಿದ್ದು, ಲಿಂಗ ಆಧಾರಿತ ಬಜೆಟ್ ಹಂಚಿಕೆ ಶೇ.5ರಷ್ಟು ಮಾತ್ರ ಮೀಸಲಿಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.