ನವದೆಹಲಿ: ನೇಪಾಳದಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳಿಗಾಗಿ ಭಾರತ 340 ಮಿಲಿಯನ್ ಯುಎಸ್ ಡಾಲರ್ ಸಾಲವಾಗಿ ನೀಡಿದೆ.
ಇದಕ್ಕೆ ಸಂಬಂಧಿಸಿದ ಕಾಗದ ಪತ್ರಗಳನ್ನು ನೇಪಾಳದಲ್ಲಿರುವ ಭಾರತದ ರಾಯಭಾರಿ ರಂಜಿತ್ ರೇ ಅವರು, ನೇಪಾಳದ ಮೂಲಸೌಕರ್ಯ ಹಾಗೂ ಸಾರಿಗೆ ಸಚಿವ ರಮೇಶ್ ಲೇಖಕ್ ಅವರಿಗೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಇದ್ದರು.
ಈ ಯೋಜನೆಯ ಅಡಿಯಲ್ಲಿ ಮಹಲಾಖಿ ಸೇತುವೆ ಹಾಗೂ 15 ವಿವಿಧ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದ ಕಾರ್ಯಗಳಿಗೆ ವಿನಿಯೋಗಿಸಲಾಗುವುದು. ನೇಪಾಳದ ಮೂಲಸೌಕರ್ಯ ವೃದ್ಧಿಸುವಲ್ಲಿ ಸಹಕಾರ ನೀಡಲು ಭಾರತ ಬದ್ಧವಾಗಿದೆ. ಇದು ಆರಂಭ ಮಾತ್ರ. ಮುಂದೆ ಜಾಗತಿಕ ಮಟ್ಟದಲ್ಲಿ ಮಿಂಚುವಂತೆ ನೇಪಾಳದ ಅಭಿವೃದ್ಧಿ ಮಾಡುತ್ತೇವೆ. ಒಂದು ದಿನ ಭಾರತದ ಸಂಸದರೇ, ನಮ್ಮ ದೇಶವೂ ನೇಪಾಳದಂತೆ ಯಾಕಾಗಬಾರದು ಎಂದು ಪ್ರಶ್ನಿಸುವಂತಾಗಬೇಕು ಎಂದು ಸಚಿವ ಸುರೇಶ್ ಪ್ರಭು ಹೇಳಿದ್ದಾರೆ.
ಭಾರತದ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿರುವ ನೇಪಾಳ ಸಚಿವ ರಮೇಶ ಲೇಖಕ್ ಅವರು, ಈ ಬೆಳವಣಿಗೆ ಭಾರತ ಹಾಗೂ ನೇಪಾಳದ ನಡುವಿನ ಸ್ನೇಹದ ಸಂಕೇತ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೇವಲ ಭೌತಿಕ ಸಂಬಂಧವಷ್ಟೇ ಅಲ್ಲದೇ, ಉಭಯ ದೇಶಗಳು ಮಾನಸಿಕವಾಗಿಯೂ ಏಕೋಭಾವನೆ ಹೊಂದುವಂತಾಗಬೇಕು. ಮೊದಲಿನಂತೆ ಉಭಯ ದೇಶಗಳ ಮಂತ್ರಿಗಳು, ಅಧಿಕಾರಿಗಳು ಪರಸ್ಪರ ಅಭಿವೃದ್ಧಿ ಕಾರ್ಯಗಳು ಕುರಿತು ಚರ್ಚಿಸಬೇಕು. ಆ ನಿಟ್ಟಿನಲ್ಲಿ ಸಂಬಂಧ ಗಟ್ಟಿಗೊಳ್ಳಬೇಕು ಎಂದು ಸುರೇಶ ಪ್ರಭು ಆಶಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.