ಲಖನೌ: ಮದುವೆ ಇಂದೇ ಫೆ.18 ರಂದು ಜರುಗಿದ್ದರೂ, ನಾಳೆ ಫೆ.19 ನಿಗದಿಯಾಗಿರುವ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಿಯೇ ಗಂಡನ ಮನೆಗೆ ಹೋಗುವುದಾಗಿ ಯುವತಿಯೋರ್ವಳು ನಿಶ್ಚಯಿಸಿದ್ದಾಳೆ. ಈ ಮೂಲಕ ಮತದಾನದ ಮಹತ್ವ ತಿಳಿಸುವ ಉದ್ದೇಶ ಅವಳದಂತೆ.
ಮನಿಷಾ ಕಶ್ಯಪ್ ಎಂಬ ಯುವತಿಗೆ 2017ರ ಫೆ.18 ರಂದೇ ಮದುವೆ ಎಂದು ಕಳೆದ ವರ್ಷವೇ ನಿಶ್ಚಯಿಸಲಾಗಿತ್ತು. ಫೆ.19 ರಂದು ವರನ ಸ್ವಗ್ರಹದಲ್ಲಿ ಬಿದಾಯಿ ಸಮಾರಂಭ ನಿಗದಿಯಾಗಿತ್ತು. ಆದರೆ 19 ರಂದೇ ಮತದಾನ ಇದ್ದ ಕಾರಣ, ಮೊದಲು ಮತಚಲಾಯಿಸಿ ನಂತರ ಬಿದಾಯಿ ಸಮಾರಂಭಕ್ಕೆ ತೆರಳುವುದಾಗಿ ಅವಳು ಹೇಳಿದ್ದಾಳೆ.
ಪ್ರತಿಯೋರ್ವ ಮಹಿಳೆಯೂ ತನಗಿರುವ ಮತದಾನದ ಹಕ್ಕಿನ ಕುರಿತು ಜಾಗೃತಿ ಹೊಂದಿರಬೇಕು ಎಂದೂ ಅವಳು ತಿಳಿಸಿರುವ ಅವಳು, ಗಂಡನ ಮನೆಗೆ ಮರುದಿನ ಹೋಗುವ ಕುರಿತು ಮನೆಯಲ್ಲಿ ಮನವರಿಕೆ ಮಾಡುವುದು ಮೊದಲು ಕಷ್ಟವಾಯಿತು. ನಂತರ ಅವರು ಒಪ್ಪಿಕೊಂಡರು ಎಂದು ತಿಳಿಸಿದ್ದಾಳೆ.
ಅತ್ತ ಆಕೆಯ ಗಂಡನ ಮನೆಯ ಕಡೆಯವರೂ ಕೂಡಾ ಮನೀಷಾಳ ನಿರ್ಣವಯನ್ನು ಸ್ವಾಗತಿಸಿದ್ದು, ಸಂತೋಷದಿಂದ ಬಿದಾಯಿ ಸಮಾರಂಭವನ್ನೇ ಫೆ.21ಕ್ಕೆ ಮುಂದೂಡಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.