ರಿಯೋ ಒಲಂಪಿಕ್ಸ್ನ ಖ್ಯಾತ ಶಟ್ಲರ್ ಪಿ.ವಿ. ಸಿಂಧು ಬಿಡಬ್ಲ್ಯುಎಫ್ ರ್ಯಾಂಕಿಂಗ್ನಲ್ಲಿ 69399 ಅಂಕಗಳ ಮೂಲಕ 5ನೇ ಸ್ಥಾನಕ್ಕೇರಿದ್ದಾರೆ. ಜಪಾನ ಆಟಗಾರ್ತಿ ಅಕಾನೆ ಯಾಮಗುಚಿ (68149 ಅಂಕ) ಅವರನ್ನು ಹಿಂದಿಕ್ಕಿ, ಸಿಂಧು 5 ನೇ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಅಗ್ರ 5 ಆಟಗಾರರ ಪಟ್ಟಿಯಲ್ಲಿ ಸಿಂಧು ಸ್ಥಾನ ಪಡೆದಿದ್ದಾರೆ.
ಇತ್ತೀಚಿಗೆ ಬಿಡಬ್ಲುಎಫ್ ಬಿಡುಗಡೆಗೊಳಿಸಿದ ಪಟ್ಟಿಯಲ್ಲಿ ಪಿ.ವಿ. ಸಿಂಧು 5ನೇ ಸ್ಥಾನ ಮತ್ತು ಇನ್ನೋರ್ವ ಭಾರತೀಯ ಆಟಗಾರ್ತಿ ಸೈನಾ ನೆಹ್ವಾಲ್ 9ನೇ ಸ್ಥಾನವನ್ನು ಪಡೆದಿದ್ದಾರೆ. ಕಳೆದ ವರ್ಷ ನಡೆದ ರಿಯೋ ಒಲಂಪಿಕ್ಸ್ನಲ್ಲಿ ಸಿಂಧು ಬೆಳ್ಳಿ ಪದಕವನ್ನು ಗೆದ್ದಿದ್ದರು. ಈ ಮೂಲಕ ಅವರು ಒಲಂಪಿಕ್ಸ್ನಲ್ಲಿ ಬೆಳ್ಳಿ ಪದಕ ಪಡೆದ ಮೊದಲ ಭಾರತೀಯ ಮಹಿಳಾ ಆಟಗಾರ್ತಿಯಾಗಿ ಹೊರಹೊಮ್ಮಿದರು.
ಚೀನೀಸ್ ಓಪನ್ನಲ್ಲಿ ಭಾಗವಹಿಸಿ ಸಿಂಧು ತಮ್ಮ ಮೊದಲ ಸೂಪರ್ ಸಿರೀಸ್ ಗೆಲವು ಸಾಧಿಸಿದರು. ಸಿಂಧು ಇತ್ತೀಚೆಗೆ ಸೈಯದ್ ಮೋದಿ ಇಂಟರ್ನ್ಯಾಶನಲ್ ಗ್ರಾಂಡ್ ಪ್ರಿಕ್ಸ್ ಗೆದ್ದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.