ನವದೆಹಲಿ: ದೇಶದಲ್ಲಿರುವ ಕೇಂದ್ರ ಸರಕಾರಿ ಆಸ್ಪತ್ರೆಗಳಿಗೆ ಖಾದಿ ಉತ್ಪನ್ನಗಳನ್ನು ಖರೀದಿಸಲು ಸೂಚಿಸಲಾಗಿದೆ. ಸೋಪ್, ವೈದ್ಯರ ಕೋಟ್ಗಳು ಹಾಗೂ ಹಾಸಿಗೆಗಳನ್ನು ಸೇರಿದಂತೆ ಇನ್ನಿತರ ಖಾದಿ ಉತ್ಪನ್ನಗಳನ್ನು ಆಸ್ಪತ್ರೆಯಲ್ಲಿ ಅಳವಡಿಸಲು ಸೂಚಿಸಲಾಗಿದೆ.
ಪಿಜಿಐ ಚಂಡೀಗಢ, ಜಿಂಪರ್ ಪದುಚೇರಿ ಮತ್ತು ಬೆಂಗಳೂರಿನ ನಿಮ್ಹಾನ್ಸ್ ಸೇರಿದಂತೆ ದೇಶದ ಸುಮಾರು 23 ಆಸ್ಪತ್ರೆಗಳಿಗೆ (ಏಮ್ಸ್ ಹೊರತುಪಡಿಸಿ) ಆರೋಗ್ಯ ಸಚಿವಾಲಯವು ಈ ಆದೇಶ ಹೊರಡಿಸಿದೆ ಎಂದು ವರದಿಗಳು ತಿಳಿಸಿವೆ.
ಕೇಂದ್ರೀಯ ಆಸ್ಪತ್ರೆಗಳು ಮತ್ತು ಆರೋಗ್ಯ ಸಚಿವಾಲಯಕ್ಕೆ ಸಂಬಂಧಿಸಿದ ಸ್ವಯಂ ಸೇವಾ ಸಂಸ್ಥೆಗಳ ಅನುಕೂಲಕ್ಕಾಗಿ ಒಟ್ಟು 45 ಅಂಶಗಳನ್ನೊಳಗೊಂಡ ’ವಿಶೇಷ’ ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಪ್ರಕಟಿತ ಪಟ್ಟಿಯಲ್ಲಿ ಕಂಬಳಿ, ಸೋಪ್ಗಳು, ನಿಲುವಂಗಿಗಳು ಮತ್ತು ಇನ್ನಿತರ ಅಂಶಗಳ ಬಳಕೆ ಬಗ್ಗೆ ಪ್ರಸ್ತಾಪಿಸಲಾಗಿದೆ.
ಕಳೆದ ವರ್ಷ ಜಾರಿಗೆ ಬಂದ ಸಮಿತಿಯ ಸಲಹೆ ಅನುಗುಣವಾಗಿ ಪಟ್ಟಿಯಲ್ಲಿರುವ ಅಂಶಗಳನ್ನು ತೀರ್ಮಾನಿಸಲಾಗಿದೆ. ಖಾದಿ ಪ್ರಚಾರ ಸಂಸ್ಥೆಯ ಜವಾಬ್ದಾರಿ ಹೊತ್ತುಕೊಂಡ ’ಖಾದಿ ಮತ್ತು ಗ್ರಾಮೊದ್ಯೋಗ ಆಯೋಗ’ (ಕೆವಿಐಸಿ)ಕ್ಕೆ ಇದೊಂದು ದೊಡ್ಡ ಸಾಂಸ್ಥಿಕ ಆದೇಶವಾಗಲಿದೆ ಎಂದು ಸಮಿತಿ ಹೇಳಿದೆ.
ಆರೋಗ್ಯ ವಲಯದಲ್ಲಿ ಖಾದಿ ಅಳವಡಿಸಿಕೊಳ್ಳಲು ಆರೋಗ್ಯ ಸಚಿವಾಲಯದ ಈ ಆದೇಶದಿಂದ ಕನಿಷ್ಠ 150 ಕೋಟಿ ರೂಪಾಯಿಗಳ ಸರಕನ್ನು ಖರೀದಿಸುವ ಮೂಲಕ ಖಾದಿ ಕ್ಷೇತ್ರಕ್ಕೆ ಸಹಾಯವಾಗಲಿದೆ ಎಂದು ಹೇಳಲಾಗುತ್ತಿದೆ.
’ಆಸ್ಪತ್ರೆ ಮತ್ತು ಸಿಬ್ಬಂದಿಗಳಿಗೆ ಖಾದಿಯನ್ನು ಬಳಸಲು ಶಿಫಾರಸ್ಸು ಮಾಡಿರುವ ಜೆ.ಪಿ. ನಡ್ಡಾ ಅವರ ಈ ಸಲಹೆ ಒಂದು ಮಹತ್ವಪೂರ್ಣ ಸಂಕೇತವಾಗಿದೆ ಮತ್ತು ಖಾದಿ ಅತ್ಯಂತ ನೈಸರ್ಗಿಕ ಮತ್ತು ಸಾವಯವ ಚರ್ಮ ಸ್ನೇಹಿ ಫ್ಯಾಬ್ರಿಕ್ (ವಸ್ತ್ರ) ಆಗಿದೆ.’ ಎಂದು ಕೆವಿಐಸಿ ಅಧ್ಯಕ್ಷ ವಿ.ಕೆ. ಸಕ್ಸೆನಾ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.