ನವದೆಹಲಿ: ಶರೀರದಲ್ಲಿ ಬ್ಯಾಕ್ಟೀರಿಯಾಗಳನ್ನು ತಡೆಗಟ್ಟಲು ಬಳಸುವ ಆ್ಯಂಟಿಬಯಾಟಿಕ್ ಔಷಧಿಗಳ ದುರ್ಬಳಕೆಯ ಪರಿಶೀಲನೆ ವ್ಯವಸ್ಥೆಯ ಭಾಗವಾಗಿ ವೈದ್ಯರು ನೀಡುವ ಔಷಧಿ ಚೀಟಿಗಳ ಆಡಿಟ್ ನಡೆಸಲು ಕೇಂದ್ರ ಚಿಂತಿಸುತ್ತಿದೆ.
ರೋಗಾಣುಗಳ ಪ್ರತಿರೋಧಕಗಳು ಒಂದು ದೊಡ್ಡ ಸವಾಲಾಗಿದೆ ಎಂದು ಕೇಂದ್ರ ಸರ್ಕಾರ ಗುರುತಿಸಿದ್ದು, ಇದರ ವಿರುದ್ಧ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಅನೇಕ ಸರ್ಕಾರಿ ಇಲಾಖೆಗಳಿಂದ ಉಪಕ್ರಮಗಳ ಬೇಡಿಕೆ ಇಟ್ಟಿದೆ. ಇದು ವೈದ್ಯರು ನೀಡುವ ಔಷಧಿ ಚೀಟಿಗಳ ಆಡಿಟ್ ಕೂಡ ಒಳಗೊಂಡಿದೆ.
ರಾಜಸ್ಥಾನದಲ್ಲಿ ಈ ಯೋಜನೆ ಈಗಾಗಲೇ ಜಾರಿಯಲ್ಲಿದ್ದು, ಸರ್ಕಾರಿ ಆಸ್ಪತ್ರೆಗಳು ವೈದ್ಯರು ನೀಡುವ ಔಷಧಿ ಚೀಟಿಗಳನ್ನು ಆನ್ಲೈನ್ ಮೂಲಕ ಅಪ್ಲೋಡ್ ಮಾಡಲಾಗುತ್ತದೆ. ಈ ಮೂಲಕ ರೋಗಿಗಳಿಗೆ ವೈದ್ಯರು ಶಿಫಾರಸ್ಸು ಮಾಡುವ ಔಷಧಿಗಳನ್ನು ಸರ್ಕಾರ ಪರಿಶೀಲಿಸುತ್ತದೆ ಎಂದು ಆರೋಗ್ಯ ಸಚಿವ ಜಗತ್ ಪ್ರಕಾಶ್ ನಡ್ಡಾ ಹೇಳಿದ್ದಾರೆ.
ಆ್ಯಂಟಿಬಯಾಟಿಕ್ಗಳನ್ನು ಪ್ರಥಮವಾಗಿ ಬ್ಯಾಕ್ಟೀರಿಯಾ ಸೋಂಕುಗಳಿಗೆ ನೀಡಲಾಗುತ್ತಿದ್ದು, ಗಂಟಲು ಕೊರೆತ, ಡಯೋರಿಯಾ ಮೊದಲಾದ ವೈರಲ್ ಸೋಂಕುಗಳ ನಿವಾರಣೆಯಲ್ಲಿ ಯಾವುದೇ ಪಾತ್ರ ವಹಿಸುವುದಿಲ್ಲ. ವೈರಲ್ ಸೋಂಕುಗಳಿಗೆ ಆ್ಯಂಟಿಬಯಾಟಿಕ್ಗಳ ದುರುಪಯೋಗ ಶರೀದಲ್ಲಿ ಬ್ಯಾಕ್ಟೀರಿಯಾಗಳ ವಿರುದ್ಧದ ಪ್ರತಿರೋಧಕಗಳನ್ನು ಹೆಚ್ಚಿಸಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.