ನವದೆಹಲಿ: 2016-17ರ ಜೂನ್ ಅಂತ್ಯದೊಳಗೆ ಭಾರತದ ಆಹಾರ ಧಾನ್ಯಗಳ ಉತ್ಪಾದನೆ ದಾಖಲೆಯ 271.98 ಟನ್ ತಲುಪುವ ಸಾಧ್ಯತೆ ಇದೆ.
ಗೋಧಿ, ಅಕ್ಕಿ, ಬೇಳೆ-ಕಾಳುಗಳು, ಧಾನ್ಯಗಳು, ಎಣ್ಣೆ ಬೀಜ ಉತ್ಪಾದನೆ ಈ ಹಿಂದಿನ ದಾಖಲೆಯನ್ನು ಮೀರಲಿದೆ ಎಂದು ಕೃಷಿ ಸಚಿವಾಲಯ ಅಂದಾಜಿಸಿದೆ.
ಕಳೆದ ವರ್ಷ ಬರಗಾಲದ ಕಾರಣ ಆಹಾರ ಧಾನ್ಯಗಳ ಉತ್ಪಾದನೆ 251.57 ಮಿಲಿಯನ್ ಟನ್ಗೆ ಕುಸಿದಿದ್ದು, 2013-14ರಲ್ಲಿ 265.04 ಮಿಲಿಯನ್ ಟನ್ ಆಹಾರ ಧಾನ್ಯ ಉತ್ಪಾದನೆಯಾಗಿತ್ತು.
2016ರಲ್ಲಿ ಉತ್ತಮ ಮಳೆಯಾಗಿದ್ದು, ಅಲ್ಲದೇ ಸರ್ಕಾರದ ವಿವಿಧ ನೀತಿಗಳ ಪರಿಣಾಮವಾಗಿ ಈ ವರ್ಷ ದೇಶದಲ್ಲಿ ಉತ್ತಮ ಬೆಳೆ ಉತ್ಪಾದನೆಯಾಗಲಿದೆ ಎಂದು ಸಚಿವಾಲಯ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.