ನವದೆಹಲಿ : ಬುಧವಾರ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ 104 ಉಪಗ್ರಹಗಳನ್ನು ಇಸ್ರೋ ಉಡಾವಣೆಗೊಳಿಸಿ ಜಾಗತಿಕ ದಾಖಲೆ ಬರೆದಿದೆ. ಇದು ಭಾರತಕ್ಕೆ ನಿಜಕ್ಕೂ ಹೆಮ್ಮೆಯ ವಿಷಯವೇ ಸರಿ.
ಇಸ್ರೋದ ಈ ಸಾಧನೆಗಾಗಿ ಎಲ್ಲೆಡೆಯಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ದೇಶ-ವಿದೇಶಗಳಿಂದಲೂ ಶ್ಲಾಘನೆಗಳು ವ್ಯಕ್ತವಾಗುತ್ತಿವೆ.
ಅನೇಕ ಗಣ್ಯರು ಇಸ್ರೋದ ದಾಖಲೆಯ ಸಾಧನೆಗಾಗಿ ಅಭಿನಂದನೆಗಳನ್ನು ಟ್ವೀಟ್ ಮೂಲಕ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು, ‘ಪಿಎಸ್ಎಲ್ವಿ-ಸಿ37 ಮತ್ತು ಕಾರ್ಟೋಸ್ಯಾಟ್ ಉಪಗ್ರಹಗಳನ್ನು ಏಕಕಾಲದಲ್ಲಿ 103 ನ್ಯಾನೋ ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ್ದಕ್ಕಾಗಿ ಇಸ್ರೋಗೆ ಅಭಿನಂದನೆಗಳು’ ಎಂದು ಟ್ವೀಟ್ ಮಾಡಿದ್ದಾರೆ.
Congratulations to @isro for the successful launch of PSLV-C37 and CARTOSAT satellite together with 103 nano satellites!
— Narendra Modi (@narendramodi) February 15, 2017
‘ಇಸ್ರೋ ಮಾಡಿರುವ ಈ ಗಮನಾರ್ಹ ಸಾಧನೆ ವೈಜ್ಞಾನಿಕ ಸಮುದಾಯ ಮತ್ತು ದೇಶಕ್ಕೆ ಹೆಮ್ಮೆಯ ಕ್ಷಣ. ಭಾರತವು ನಮ್ಮ ವಿಜ್ಞಾನಿಗಳಿಗೆ ಸೆಲ್ಯೂಟ್ ಮಾಡುತ್ತದೆ. ಬಾಹ್ಯಾಕಾಶ ಕೇಂದ್ರದ ಕಾರ್ಯದರ್ಶಿಯವರೊಂದಿಗೆ ಮಾತನಾಡಿ, ಅವರಿಗೆ ಮತ್ತು ಎಲ್ಲಾ ವಿಜ್ಞಾನಿಗಳ ತಂಡಕ್ಕೆ ಇಂದಿನ ಅಸಾಧಾರಣ ಸಾಧನೆಗೆ ಅಭಿನಂದಿಸಿದ್ದೇನೆ’ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
This remarkable feat by @isro is yet another proud moment for our space scientific community and the nation. India salutes our scientists.
— Narendra Modi (@narendramodi) February 15, 2017
Spoke to the Secretary, Department of Space and congratulated him & the entire team of scientists on today’s exceptional achievement.
— Narendra Modi (@narendramodi) February 15, 2017
ಅನೇಕ ಗಣ್ಯರು, ಮಾಧ್ಯಮಗಳು ಸೇರಿದಂತೆ ಎಲ್ಲರೂ ಟ್ವೀಟ್ ಮಾಡುವುದರ ಮೂಲಕ ಇಸ್ರೋಗೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ.
ಇಸ್ರೋ ಇಂದು ಬಾಹ್ಯಾಕಾಶ ಕ್ಷೇತ್ರದಲ್ಲಿ ಜಾಗತಿಕ ದಾಖಲೆ ಬರೆಯುವುದರ ಮೂಲಕ ಭಾರತವು ವಿಶ್ವಗುರುವಾಗುವತ್ತ ಮತ್ತೊಂದು ಹೆಜ್ಜೆಯನ್ನಿಟ್ಟಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.