ನವದೆಹಲಿ: ಔಷಧಿಗಳ ಬೆಲೆಗಳನ್ನು ನಿರ್ಧರಿಸುವ ದೇಶದ ಉನ್ನತ ಸಂಸ್ಥೆಯಾಗಿರುವ ಕೇಂದ್ರ ಔಷಧ ಬೆಲೆ ನಿರ್ಧಾರ ಪ್ರಾಧಿಕಾರ (ಎನ್ಪಿಪಿಎ) ಕೋರೋನರಿ ಸ್ಟೆಂಟ್ಗಳ ದರಗಳನ್ನು ಶೇ. 85ರಷ್ಟು ಕಡಿತಗೊಳಿಸಿದ್ದು, 30,000ಕ್ಕೆ ಕಡಿತಗೊಳಿಸಿದೆ.
ಕೋರೋನರಿ ಸ್ಟೆಂಟ್ಗಳು ಹೃದಯದ ನಾಡಿಗಳು ಬ್ಲಾಕ್ ಆದಲ್ಲಿ ಅದನ್ನು ಸ್ವಚ್ಛಗೊಳಿಸಲು ಬಳಸಲಾಗುವ ಸ್ಪ್ರಿಂಗ್ ಮಾದರಿಯ ಲೋಹದ ಸಾಧನವಾಗಿದೆ.
ಸ್ಟೆಂಟ್ಗಳ ವಿತರಣೆ ಮತ್ತು ಪೂರೈಕೆಯ ಪ್ರತಿ ಹಂತದಲ್ಲಿ ದರಗಳು ವ್ಯತ್ಯಾಸವಾಗುತ್ತಿದ್ದು, ರೋಗಿಗಳು ಸ್ಟೆಂಟ್ಗಳನ್ನು ಪಡೆಯವಷ್ಟರಲ್ಲಿ ಇದರ ಮೂಲ ದರಗಳು ಶೇ.1000ದಿಂದ 2000ದಷ್ಟು ಹೆಚ್ಚಾಗಿರುತ್ತವೆ.
ಸ್ಟೆಂಟ್ ಸಾಧನದ ಬೆಲೆ ನಿಯಂತ್ರಣವನ್ನು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕಿ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಆದೇಶಿಸಿದ್ದು, ಕೇಂದ್ರ ಆರೋಗ್ಯ ಸಚಿವಾಲಯ ಸ್ಟೆಂಟಗಳನ್ನು ಆವಶ್ಯಕ ಔಷಧಿಗಳ ರಾಷ್ಟ್ರೀಯ ಪಟ್ಟಿ (ಎನ್ಎಲ್ಇಎಂ)ಗೆ ಸೇರಿಸಿದೆ.
ಔಷಧಿಗಳ ಬೆಲೆ ನಿಯಂತ್ರಣಕ್ಕಾಗಿ ಎಲ್ಲ ಔಷಧಿಗಳನ್ನು ಎನ್ಎಲ್ಇಎಂ ಅಡಿಯಲ್ಲಿ ವಿವರಣೆ-1 ಔಷಧಿಗಳು ಎಂದು ಗುರುತಿಸಬೇಕಿದೆ.
ಸ್ಟೆಂಟ್ಗಳನ್ನು ಬೇರ್ ಮೆಟಲ್ ಸ್ಟೆಂಟ್ಗಳು ಮತ್ತು ಡ್ರಗ್ ಎಲ್ಯೂಟಿಂಗ್ ಸ್ಟೆಂಟ್ಗಳು ಎಂದು ಎರಡು ಗುಂಪುಗಳಾಗಿ ವರ್ಗೀಕರಿಸಲಾಗಿದೆ.
ಬೇರ್ ಮೆಟಲ್ ಸ್ಟೆಂಟ್ಗಳ ಬೆಲೆ 25,000ದಿಂದ 75,000 ವರೆಗೆ ಇದ್ದರೆ ಡ್ರಗ್ ಎಲ್ಯೂಟಿಂಗ್ ಸ್ಟೆಂಟ್ಗಳ ಬೆಲೆ 40,000ದಿಂದ 1,98,000 ವರೆಗೆ ಇರುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.