ಕೊಚ್ಚಿ: ದೇಶದಲ್ಲಿಯೇ ಮೊದಲ ಬಾರಿಗೆ ಐಎನ್ಎಸ್ನ (ಇಂಡಿಯನ್ ನೇವಿ ಸರ್ವಿಸ್) ಸರ್ವೇಕ್ಷಕ್ನಲ್ಲಿ 18 ಸೋಲಾರ್ ಪ್ಯಾನೆಲ್ಸ್ಗಳನ್ನು ಅಳವಡಿಸಲಾಗಿದೆ.
300 ವ್ಯಾಟ್ನ ಪಾನೆಲ್ಗಳಿದ್ದು, ಅವು 5.4ಕೆ.ವಿ ವಿದ್ಯುತ್ ಉತ್ಪಾದನಾ ಶಕ್ತಿ ಹೊಂದಿವೆ. ಈಗಾಗಲೇ ಈ ಸೌರ ವಿದ್ಯುತ್ ಶಕ್ತಿ ಬಳಕೆ ಕುರಿತಂತೆ ತಿಳಿಯಲು ಮೀಟರ್ ಅಳವಡಿಸಲಾಗಿದೆ. ಈ ಎಲ್ಲ ಕಾರ್ಯ ಪೂರೈಸಲು ಅಂದಾಜು 6 ತಿಂಗಳು ಸಮಯ ಬೇಕಾಯಿತು ಎಂದು ಕ್ಯಾ. ರಾಜೇಶ ಬರ್ಗೋಟಿ ತಿಳಿಸಿದ್ದಾರೆ.
ಕ್ಯಾ.ರಾಜೇಶ್ ಬರ್ಗೋಟಿ ಅವರು ಹೇಳುವಂತೆ, ನೌಕೆಗೆ ಸೌರ ವಿದ್ಯುತ್ ಪ್ಯಾನೆಲ್ ಅಳವಡಿಸುವುದು ಸವಾಲಿನ ಕೆಲಸವೇ ಆಗಿದೆ. ಏಕೆಂದರೆ, ನೌಕೆ ಸಾಗುವ ಪರಿಸರ ತುಂಬಾ ರಭಸವಾದ ಗಾಳಿಯಿಂದ ಕೂಡಿದ್ದು, ಸಾಮಾನ್ಯ ಪ್ಯಾನೆಲ್ಗಳು ಹಾನಿಗೊಳಗಾಗಿಬಿಡುವ ಸಾಧ್ಯತೆಯೇ ಹೆಚ್ಚು ಎಂದಿದ್ದಾರೆ.
ಸೌರ ವಿದ್ಯುತ್ ಶಕ್ತಿ ಶೇಖರಣೆಗೆ 10 ಬ್ಯಾಟರಿಗಳನ್ನು ಬಳಸುತ್ತೇವೆ. ನೌಕೆ ಚಲನೆಯಲ್ಲಿರುವಾಗ ಇದೇ ವಿದ್ಯುತ್ಗೆ ಆದ್ಯತೆ ನೀಡಲಾಗುತ್ತಿದ್ದು, ಬಂದರಿಗೆ ಬಂದು ಲಂಗರು ಹಾಕಿದಾಗ ಮಾತ್ರ ರಾಜ್ಯ ವಿದ್ಯುಚ್ಚಕ್ತಿ ನಿಗಮ ಪೂರೈಸುವ ವಿದ್ಯುತ್ ಬಳಸಲಾಗುತ್ತದೆ ಎಂದು ಎಲೆಕ್ಟ್ರಿಕಲ್ ಇಂಜಿನಿಯರ್ ಕಮಾಂಡರ್ ಶ್ರೀಜಿತ್ ಥಂಪಿ ಹೇಳಿದ್ದಾರೆ.
ನೇವಿ ಹೆಡ್ಕ್ವಾರ್ಟ್ಸ್ ವತಿಯಿಂದ ಆಯೋಜಿಸಲಾಗಿದ್ದ, ಈ ಪ್ರೊಜೆಕ್ಟ್ನ ಪ್ರದರ್ಶನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.