ನವದೆಹಲಿ: ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸಲು ಹಾಗೂ ಅಪರಾಧ ಚಟುವಟಿಕೆಗಳನ್ನು ತಡೆಗಟ್ಟಲು ಶೀಘ್ರದಲ್ಲೇ ರಾಜಧಾನಿ ಮತ್ತು ಶತಾಬ್ದಿ ರೈಲುಗಳ ಬೋಗಿಗಳಿಗೆ ಸ್ವಯಂಚಾಲಿತ ಡೋರ್ ಲಾಕಿಂಗ್ ವ್ಯವಸ್ಥೆಯನ್ನು ಅಳವಡಿಸಲಾಗುವುದು.
ರೈಲ್ವೆ ಸಿಬ್ಬಂದಿ ತನ್ನ ಕ್ಯಾಬಿನ್ನಿಂದ ನಿಯಂತ್ರಿಸುವ ಈ ಹೊಸ ವ್ಯವಸ್ಥೆಯಡಿ ರೈಲ್ವೆ ನಿಲ್ದಾಣಕ್ಕೆ ರೈಲು ಆಗಮಿಸಿದಂತೆ ಬಾಗಿಲು ತೆರೆಯಲಿದೆ ಮತ್ತು ರೈಲು ಹೊರಡುವ ವೇಳೆ ಸ್ವಯಂ ಆಗಿ ಮುಚ್ಚಲಿವೆ.
ಪ್ರಸ್ತುತ ರೈಲುಗಳ ಬಾಗಿಲನ್ನು ಕೈಯಾರೆ ಮುಚ್ಚಲಾಗುತ್ತಿದೆ.
ಎರಡು ರಾಜಧಾನಿ ಮತ್ತು ಎರಡು ಶತಾಬ್ದಿ ರೈಲುಗಳಿಗೆ ಸ್ವಯಂಚಾಲಿತ ಡೋರ್ ಲಾಕಿಂಗ್ ವ್ಯವಸ್ಥೆಯ ಪ್ರಾಯೋಗಿಕ ಯೋಜನೆ ಎಪ್ರಿಲ್ ತಿಂಗಳಿನಿಂದ ಕಾರ್ಯನಿರ್ವಹಿಸಲಿದೆ. ಅನಂತರ ಇದನ್ನು ಉಪನಗರ ರೈಲು ಸೇವೆಗಳಿಗೆ ಅಳವಡಿಸಲಾಗುವುದು ಎಂದು ರೈಲ್ವೆ ಸಚಿವಾಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಚಲಿಸುತ್ತಿರುವ ರೈಲಿನ ಬೋಗಿಗಳಿಗೆ ಹತ್ತುವ ಸಂದರ್ಭ ತಪ್ಪಿ ಬೀಳುವುದು, ವಿದ್ಯುತ್ ಕಂಬಕ್ಕೆ ಬಡಿದು ಪ್ರಯಾಣಿಕರು ಸಾವನ್ನಪ್ಪುತ್ತಿರುವ ಘಟನೆಗಳು ಹೆಚ್ಚುತ್ತಿದ್ದು, ಈ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.