ವಾಷಿಂಗ್ಟನ್: ಆ್ಯಪಲ್ ಐಫೋನ್ ಬಗ್ಗೆ ಹಲವು ವದಂತಿಗಳು ಮುಂದುವರೆಯುತ್ತಿರುವಾಗಲೇ ಇದೀಗ 10ನೇ ವಾರ್ಷಿಕೋತ್ಸವ ಆವೃತ್ತಿಯ ಐಫೋನ್ 8 ವೈರ್ಲೆಸ್ ಚಾರ್ಜಿಂಗ್ ಸೌಲಭ್ಯದೊಂದಿಗೆ ಬರಲಿದೆ ಎನ್ನಲಾಗುತ್ತಿದೆ.
ಉತ್ತಮ ಶಾಖೋತ್ಪನ್ನ ನಿಯಂತ್ರಣಕ್ಕೆ ಹೆಚ್ಚುವರಿ ಗ್ರಾಫೈಟ್ ಶೀಟ್ ಅಳವಡಿಕೆ, ಸ್ಥಿರ ಬಳಕೆ, ಒಎಲ್ಇಡಿ ಐಫೋನ್ಗಳ 3D ಟಚ್ ಸೆನ್ಸಾರ್ಗಳು ತಾಪಮಾನ ಬದಲಾವಣೆಗೆ ಹೆಚ್ಚು ಸೂಕ್ಷ್ಮವಾಗಿದ್ದು ಅದಕ್ಕಾಗಿ ಎಫ್ಪಿಸಿಬಿ ಬದಲು ಫಿಲಂ ಬಳಸುವುದು ಅಗತ್ಯವಿದೆ ಎಂದು ಆಪಲ್ ವಿಶ್ಲೇಷಕ ಮಿಂಗ್-ಚಿ ಕ್ಯೋ ಹೇಳಿದ್ದಾರೆ.
ಇನ್ನು ಐಫೋನ್ 8 ಒಎಲ್ಇಡಿ ಡಿಸ್ಪ್ಲೇ ಮತ್ತು ನೀರು ನಿರೋಧಕ ವೈಶಿಷ್ಟ್ಯಗಳೊಂದಿಗೆ ಎರಡು ಗಾತ್ರಗಳಲ್ಲಿ ಬರಲಿದೆ. ಇದು ಉತ್ತಮ ೨ಡಿ ಟಚ್ ತಂತ್ರಜ್ಞಾನವನ್ನು ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ.
ಐಫೋನ್ 8 ಎರಡೂ ಬದಿಗಳಲ್ಲಿ ಸ್ಟೀಲ್ ಫ್ರೇಮ್ ಹಾಗೂ ಮುಂಭಾಗ ಮತ್ತು ಹಿಂಭಾಗಗಳಲ್ಲಿ ಗಾಜಿನ ಫ್ರೇಮ್ ಇರಲಿದೆ.
ಸ್ಟೀಲ್ ಫ್ರೇಮ್ ಹಾಗೂ ಗ್ರಾಫೈಟ್ ಶೀಟ್ ಬಳಕೆಯಿಂದಾಗಿ ಇದರ ಬೆಲೆಯಲ್ಲಿ ಏರಿಕೆಯಾಗುವ ಸಾಧ್ಯತೆ ಇದ್ದು, ಗ್ರಾಹಕರಿಗೆ ಕಹಿ ಸುದ್ದಿಯಾಗಲಿದೆ. ಇದರ ಬೆಲೆ ಅಂದಾಜು 1000 ಡಾಲರ್ (ಸುಮಾರು 68,000-70,000) ಇರಲಿದೆ ಎಂದು ಇತ್ತೀಚಿನ ವರದಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.