ಹೈದರಾಬಾದ್: ವನಸ್ಥಲಿಪುರಂ ನಿವಾಸಿ 119 ವರ್ಷದ ತೇಕುಮಾಟ್ಲಾ ನರಸಮ್ಮ ದೇಶದ ಅತ್ಯಂತ ಹಿರಿಯ ಮಹಿಳೆ ಎಂದು ಗುರುತಿಸಲಾಗಿದೆ.
ಆಧಾರ ಕಾರ್ಡ್ನ ಮೂಲಕ ಮಾಹಿತಿ ಗಮನಕ್ಕೆ ಬಂದಿದೆ. 1898 ಜ.1 ರಂದು ನರಸಮ್ಮ ರಂಗಾರೆಡ್ಡಿ ಜಿಲ್ಲೆಯ ಅದಿಬಾಟ್ಲಾ ಸಮೀಪದ ಬೊಂಗ್ಲೂರು ಗ್ರಾಮದಲ್ಲಿ ಜನಿಸಿದ್ದಾರೆ. ಸದ್ಯ ವನಸ್ಥಲಿಪುರಂನಲ್ಲಿ ಪುತ್ರಿಯೊಂದಿಗೆ ನರಸಮ್ಮ ವಾಸಿಸಿದ್ದಾರೆ.
ತೇಕುಮಾಟ್ಲಾ ಜಂಗಯ್ಯ ಎಂಬವರ ಜೊತೆ ವಿವಾಹವಾದ ಬಳಿಕ ನರಸಮ್ಮ ವನಸ್ಥಲಿಪುರಂನಲ್ಲಿದ್ದು, ಇವರಿಗೆ ಮೂವರು ಪುತ್ರರು ಹಾಗೂ ಓರ್ವ ಪುತ್ರಿಯಿದ್ದಳು. ಪುತ್ರರೆಲ್ಲರೂ ಬಾಲ್ಯದಲ್ಲಿಯೇ ಸಾವನ್ನಪ್ಪಿದ್ದು, ಪತಿ ಜಂಗಯ್ಯ ನಿಧನರಾದ ಬಳಿಕ ನರಸಮ್ಮ, ತಮ್ಮ ಪುತ್ರಿ 74 ವರ್ಷದ ಪೆಂಟಮ್ಮಳ ಜೊತೆ ವಾಸಿಸುತ್ತಿದ್ದಾರೆ.
ತಮ್ಮ ತಾಯಿ ಈಗಲೂ ಆರೋಗ್ಯವಾಗಿದ್ದಾರೆಂದು ಹೇಳಿರುವ ಪೆಂಟಮ್ಮ, ದಿನಕ್ಕೆ ಮೂರು ಬಾರಿ ಊಟ ಮಾಡುವ ಅವರು, ಜ್ವರ, ಶೀತಕ್ಕೆ ಮಾತ್ರೆ ತೆಗೆದುಕೊಂಡೇ ಇಲ್ಲವೆಂದು ತಿಳಿಸಿದ್ದಾರೆ. ಈ ಹಿಂದೆ ತ್ರಿಶೂರಿನ ಕುಂಜಮ್ಮರನ್ನು ದೇಶದ ಹಿರಿಯ ಮಹಿಳೆ ಎಂದು ಗುರುತಿಸಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.