ಪುರಿ: ಅಂತಾರಾಷ್ಟ್ರೀಯ ಪ್ರಸಿದ್ಧ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ವಿಶ್ವದ ಅತಿ ಎತ್ತರದ ಮರಳಿನ ಕೋಟೆ ರಚಿಸಿ ಗಿನ್ನೆಸ್ ವಿಶ್ವ ದಾಖಲೆ ಮಾಡಿದ್ದಾರೆ.
ಸುದರ್ಶನ್ ಪಟ್ನಾಯಕ್ 48 ಅಡಿ ಹಾಗೂ 8 ಇಂಚು ಎತ್ತರದ ಮರಳಿನ ಕೋಟೆ ರಚಿಸಿ ಈ ದಾಖಲೆ ನಿರ್ಮಿಸಿದ್ದು, 45 ಅಡಿ ಎತ್ತರದ ಮರಳಿನ ಕೋಟೆ ರಚಿಸಿರುವುದು ಈ ಹಿಂದಿನ ದಾಖಲೆಯಾಗಿದೆ.
ಸುದರ್ಶನ್ ಪಟ್ನಾಯಕ್ ಹಾಗೂ ಸುದರ್ಶನ್ ಮರಳು ಕಲಾ ಸಂಸ್ಥೆಯ 30 ವಿದ್ಯಾರ್ಥಿಗಳ ತಂಡ ಪುರಿ ಬೀಚ್ನ ಪಂಥ ನಿವಾಸ್ ಬಳಿ ಈ ಮರಳು ಕೋಟೆ ರಚಿಸಿದ್ದಾರೆ. ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್ ಅಧಿಕಾರಿಗಳು ಪಟ್ನಾಯಕ್ ಅವರಿಗೆ ಪ್ರಮಾಣಪತ್ರ ನೀಡಿ ಗೌರವಿಸಿದ್ದಾರೆ.
ಸುದರ್ಶನ್ ಪಟ್ನಾಯಕ್ 2016ರ ಕ್ರಿಸ್ಮಸ್ ಸಂದರ್ಭದಲ್ಲಿ 4 ದಿನಗಳಲ್ಲಿ 1000 ಟನ್ ಮರಳು ಬಳಸಿ 1010 ಸಾಂತಾ ಕ್ಲಾಸ್ ಮರಳು ಶಿಲ್ಪ ರಚಿಸಿರುವುದು ಲಿಮ್ಕಾ ದಾಖಲೆ ಪಟ್ಟಿಗೆ ಸೇರಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.