ನವದೆಹಲಿ: ನೇಮಕಾತಿ ಪ್ರಕ್ರಿಯೆಗಳಲ್ಲಿ ದುಷ್ಕೃತ್ಯಗಳು ಸಮಸ್ಯೆ ನಿವಾರಿಸಲು ಭಾರತೀಯ ರೈಲ್ವೆ ವಿವಿಧ ವಿಭಾಗಗಳ 18,000 ಹುದ್ದೆಗಳ ಭರ್ತಿಗೆ ವಿಶ್ವದಲ್ಲೇ ಅತಿ ದೊಡ್ಡ ಆನ್ಲೈನ್ ಪರೀಕ್ಷೆ ನಡೆಸಲಿದೆ.
ರೈಲ್ವೆ ನೇಮಕಾತಿ ಮಂಡಳಿ 18,252 ಪದವಿ ಮಟ್ಟದ ಗ್ರೂಪ್-೩ ಹುದ್ದೆಗಳು, ಸಹಾಯಕ ಸ್ಟೇಷನ್ ಮಾಸ್ಟರ್, ವಿಚಾರಣೆ ಮತ್ತು ಮೀಸಲಾತಿ ಗುಮಾಸ್ತ, ಸಂಚಾರ ಮತ್ತು ವಾಣಿಜ್ಯ ಉಮೇದವಾರ ಹಾಗೂ ಜೂನಿಯರ್ ಖಾತೆಗಳ ಸಹಾಯಕ ಹುದ್ದೆಗಳಿಗೆ ಆನ್ಲೈನ್ ಪರೀಕ್ಷೆ ನಡೆಸಲಿದೆ.
ಆಯ್ಕೆಯ ಮುಂದಿನ ಹಂತದಲ್ಲಿ ಸಹಾಯಕ ಸ್ಟೇಷನ್ ಮಾಸ್ಟರ್ಗಳ ಮಾನಸಿಕ ಪರೀಕ್ಷೆ ಹಾಗೂ ಹಿರಿಯ ಗುಮಾಸ್ತರ ಟೈಪಿಂಗ್ ಪರೀಕ್ಷೆಗಳು ಮತ್ತು ನೇಮಕಾತಿ ಪತ್ರಗಳನ್ನು ಮೇ ತಿಂಗಳಲ್ಲಿ ನೀಡಲಾಗುವುದು.
ಮೊದಲ ಹಂತದಲ್ಲಿ 92 ಲಕ್ಷ ಅಭ್ಯರ್ಥಿಗಳು ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದು, 2.73 ಲಕ್ಷ ಅಭ್ಯರ್ಥಿಗಳು ಪ್ರಾಥಮಿಕ ಪರೀಕ್ಷೆಯಲ್ಲಿ ಅರ್ಹತೆ ಪಡೆದಿದ್ದರು. ಈ ಅಭ್ಯರ್ಥಿಗಳಿಗೆ ಜನವರಿ 17-18ರ ವರೆಗೆ ಬರಹ ಪರೀಕ್ಷೆ ನಡೆಸಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.