ವಾಷಿಂಗ್ಟನ್: ಬಾವ್ ಬಾವ್ ಪಾಂಡಾ ತನ್ನ ನೆಚ್ಚಿನ ತಿನಿಸುಗಳೊಂದಿಗೆ ಚೀನಾಕ್ಕೆ ಇದೇ ಫೆ.21 ರಂದು ಪ್ರಯಾಣ ಬೆಳಸಲಿದೆ ಎಂದು ವಾಷಿಂಗ್ಟನ್ನ ಸ್ಮಿತ್ಸಾನಿಯನ್ ರಾಷ್ಟ್ರೀಯ ಪ್ರಾಣಿ ಸಂಗ್ರಹಾಲಯದ ಅಧಿಕೃತ ಮೂಲಗಳು ತಿಳಿಸಿವೆ.
ಪ್ರಾಣಿ ಪ್ರಪಂಚದ ಅಪರೂಪದ ಬಾವ್ ಬಾವ್ ಪಾಂಡಾ 2013 ರ ಆಗಸ್ಟ್ನಲ್ಲಿ ವಾಷಿಂಗ್ಟನ್ ಝೂನಲ್ಲಿ ಜನಿಸಿದ್ದು, ಇದೀಗ ನಾಲ್ಕನೇ ವರ್ಷದ ಹುಟ್ಟು ಹಬ್ಬದ ಸಂಭ್ರಮದಲ್ಲಿದೆ. ಯುಎಸ್ ಹಾಗೂ ಚೈನಾ ನಡುವಿನ ಜಾರಿಯಲ್ಲಿರುವ ವ್ಯವಸ್ಥೆಯಂತೆ, ಯುಎಸ್ನಲ್ಲಿ ಪಾಂಡಾ ಜನಿಸಿದರೂ ಅವುಗಳನ್ನು 4 ವರ್ಷದ ನಂತರ ಚೀನಾಗೆ ಮರಳಿಸಬೇಕು ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಇದೇ ರೀತಿ 2005 ರಲ್ಲಿ ಜನಿಸಿದ್ದ ಪಾಂಡಾವನ್ನು 2010 ರಲ್ಲಿ ವಾಷಿಂಗ್ಟ್ನ್ನಿಂದ ಚೀನಾಕ್ಕೆ ರವಾನಿಸಲಾಗಿತ್ತು. ಇದನ್ನು ಕಳುಹಿಸುವಾಗ ಇದರೊಂದಿಗೆ ಒಬ್ಬ ಪಶುವೈದ್ಯ ಹಾಗೂ ಇನ್ನೊಬ್ಬ ಇರುತ್ತಾರೆ. ಚೀನಾದ ಚೆಂಗುಡು ಪ್ರದೇಶದಲ್ಲಿ ಪಾಂಡಾ ಸಂರಕ್ಷಣೆ ಹಾಗೂ ಸಂಶೋಧನಾ ಕೇಂದ್ರವಿದ್ದು ಅಲ್ಲಿಗೆ ಇವನ್ನು ಕಳುಹಿಸಲಾಗುತ್ತದೆ.
ಬಂಬೂ, ಸೇಬು, ಪೇರಳೆ, ಬೇಯಿಸಿದ ಆಲೂಗಡ್ಡೆ ಮತ್ತು ನೀರು ಇತ್ಯಾದಿಗಳು ದೈತ್ಯ ಪಾಂಡಾದ ಅತಿ ನೆಚ್ಚಿನ ತಿನಿಸುಗಳು. ಪ್ರಾಣಿ ಪ್ರಿಯರು ಪಾಂಡಾಗೊಂದು ಹ್ಯಾಪಿ ಜರ್ನಿ ಹೇಳಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.