ನವದೆಹಲಿ: ಭಾರತದ ಯೋಗಿ, ಕವಿ ಹಾಗೂ ಸಂತ ಗುರು ರವಿದಾಸರ ಆದರ್ಶಗಳು, ಚಿಂತನೆಗಳು ಸಮಾಜದ ಮೇಲೆ ಆಳವಾದ ಪ್ರಭಾವ ಬೀರಿದೆ ಎಂದು ಗುರು ರವಿದಾಸ್ ಜಯಂತಿಯಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
‘ಗುರು ರವಿದಾಸ್ ಜಯಂತಿಯ ಈ ಶುಭ ಸಂದರ್ಭದಲ್ಲಿ ನಾನು ಗುರು ರವಿದಾಸ್ ಜಿ ಅವರಿಗೆ ವಂದಿಸುತ್ತೇನೆ. ಅವರ ಚಿಂತನೆಗಳು, ಆದರ್ಶಗಳು ಸಮಾಜದ ಮೇಲೆ ಆಳವಾದ ಪ್ರಭಾವವನ್ನು ಬೀರಿದೆ’ ಎಂದು ಪ್ರಧಾನಿ ಮೋದಿ ಅವರು ಟ್ವೀಟ್ ಮಾಡಿದ್ದಾರೆ.
ಗುರು ರವಿದಾಸ್ರ ಮೌಲ್ಯಗಳನ್ನು ಭಾರತೀಯ ಸಂಸ್ಕೃತಿ ಮತ್ತು ತತ್ವಗಳಿಗೆ ಹೋಲಿಸಿದ ಪ್ರಧಾನಿ ಮೋದಿ ಅವರು, ಗುರು ರವಿದಾಸರ ಸಾಮರಸ್ಯ, ಸಮಾನತೆ ಮತ್ತು ಸಹಾನುಭೂತಿ ದೇಶದ ಸಂಸ್ಕೃತಿಯ ಕೇಂದ್ರಗಳಾಗಿವೆ ಎಂದು ಹೇಳಿದ್ದಾರೆ.
ಗುರು ರವಿದಾಸರು ಉತ್ತರ ಭಾರತದ ಭಕ್ತಿ ಚಳುವಳಿಯ ಸಂತರು, ಕವಿಗಳಾಗಿದ್ದು, ಅವರ ಭಕ್ತಿ ಗೀತೆಗಳು ಶಾಶ್ವತವಾದ ಪ್ರಭಾವ ಬೀರಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.