ನವದೆಹಲಿ: ಭಾರತ ಮತ್ತು ಇಂಡೋನೇಷ್ಯಾ ಮೊದಲ ಜಂಟಿ ವಾಯು ಸಮರ ತರಬೇತಿ ನಡೆಸಲು ಹಾಗೂ ಕಡಲು ಭದ್ರತಾ ಸಹಕಾರ ಬಲಪಡಿಸಲು ನಿರ್ಧರಿಸಿದೆ.
ಇತ್ತೀಚೆಗೆ ರಕ್ಷಣಾ ಕಾರ್ಯದರ್ಶಿ ಜಿ. ಮೋಹನ್ ಕುಮಾರ್ ಅವರು ಇಂಡೋನೇಷ್ಯಾಗೆ ಭೇಟಿ ನೀಡಿದ್ದ ಸಂದರ್ಭ ಇಂಡೋನೇಷ್ಯಾದ ನಾವಿಕರಿಗೆ ಜಲಾಂತರ್ಗಾಮಿ ಕಾರ್ಯಾಚರಣೆ ಕಲೆಯ ತರಬೇತಿ ನೀಡಲು ಭಾರತ ಆಫರ್ ನೀಡಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.
ಈವರೆಗೆ ಭಾರತ ಮತ್ತು ಇಂಡೋನೇಷ್ಯಾ ಜಂಟಿ ಸೇನಾ ತರಬೇತಿಗಳನ್ನು ನಡೆಸುತ್ತಿದ್ದು, ಈಗ ವಾಯುಪಡೆ ಜಂಟಿ ಸಮರ ಅಭ್ಯಾಸ ನಡೆಸಲು ನಿರ್ಧರಿಸಿದೆ.
ಭಾರತ ಈಗಾಗಲೇ ವಿಯೇಟ್ನಾಮ್, ಸಿಂಗಾಪುರ ಮತ್ತಿತರ ಆಗ್ನೇಯ ಏಷ್ಯಾ ರಾಷ್ಟ್ರಗಳೊಂದಿಗೆ ಮಿಲಿಟರಿ ಒಪ್ಪಂದಗಳನ್ನು ನಡೆಸಿದ್ದು, ಅನಂತರದಲ್ಲಿ ಈಗ ಇಂಡೋನೇಷ್ಯಾ ಜೊತೆ ರಕ್ಷಣಾ ಸಂಬಂಧಗಳನ್ನು ನಡೆಸಲು ಮುಂದಾಗಿದೆ. ರಕ್ಷಣಾ ಕ್ಷೇತ್ರ ಅಲ್ಲದೇ ಸೇನಾ ತರಬೇತಿ ‘ಗರುಡ ಶಕ್ತಿ’ಯನ್ನು ಅಪ್ಗ್ರೇಡ್ ಮಡಲಿದದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.