ನವದೆಹಲಿ: ಚೀನಾದ ಇಂಟರ್ನೆಟ್ ದೈತ್ಯ ಅಲಿಬಾಬಾ ಭಾರತದಲ್ಲಿ ಉಚಿತ ಇಂಟರ್ನೆಟ್ ಸೇವೆ ಒದಗಿಸುವ ಸಾಧ್ಯತೆಗಳಿವೆ. ಈ ಬಗ್ಗೆ ಕಂಪೆನಿ ಉಚಿತ ಇಂಟರ್ನೆಟ್ ಒದಗಿಸಲು ಭಾರತದ ಟೆಲಿಕಾಂ ನಿರ್ವಾಹಕರು ಮತ್ತು ವೈ-ಫೈ ಪೂರೈಕೆದಾರರ ಜೊತೆ ಮಾತುಕತೆ ನಡೆಸುತ್ತಿದೆ ಎಂದು ಮಾಧ್ಯಮ ವರದಿ ತಿಳಿಸಿದೆ.
ಟೆಲಿಕಾಂ ನಿರ್ವಾಹಕರು ಮತ್ತು ವೈ-ಫೈ ಪೂರೈಕೆದಾರರ ಜೊತೆ ಕೆಲಸ ನಿರ್ವಹಿಸುವ ಎಲ್ಲ ಅವಕಾಶಗಳನ್ನು ಮುಂದೆ ನೋಡುತ್ತಿದ್ದೇವೆ. ಗ್ರಾಹಕರಿಗೆ ಉತ್ತಮ ಕನೆಕ್ಟಿವಿಟಿಯೊಂದಿಗೆ ಕಡಿಮೆ ವೆಚ್ಚದಲ್ಲಿ ಡಾಟಾ ಒದಗಿಸಲು ಅಥವಾ ಉಚಿತವಾಗಿ ಇಂಟರ್ನೆಟ್ ಒದಗಿಸಲು ಪ್ರಯತ್ನಿಸಲಿದ್ದೇವೆ. ವೈ-ಫೈ ಪೂರೈಕೆದಾರರು ಹಾಗೂ ಇತರ ನಿರ್ವಾಹಕರೊಂದಿಗೆ ಚರ್ಚೆ ನಡೆಸಲಿದ್ದೇವೆ ಎಂದು ಅಲಿಬಾಬಾ ಮೊಬೈಲ್ ವ್ಯವಹಾರಗಳ ವಿದೇಶಾಂಗ ವ್ಯವಹಾರಗಳ ಅಧ್ಯಕ್ಷ ಜ್ಯಾಕ್ ಹುವಾಂಗ್ ಹೇಳಿದ್ದಾರೆ.
ಸಂಪರ್ಕದ ಸಮಸ್ಯೆ ಇರುವ ರಾಜ್ಯಗಳಿಗೆ ಉಚಿತ ಇಂಟರ್ನೆಟ್ ಒದಗಿಸಲು ಅಲಿಬಾಬಾ ಚಿಂತಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.