ವಾಷಿಂಗ್ಟನ್: ಜಾಗತಿಕ ಆವಿಷ್ಕಾರ ಸೂಚ್ಯಂಕದ 45 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 43ನೇ ಸ್ಥಾನದಲ್ಲಿದೆ ಎಂದು ಅಮೇರಿಕಾದ ವಾಣಿಜ್ಯ ಚೇಂಬರ್ ಬಿಡುಗಡೆ ಮಾಡಿದ ವರದಿ ತಿಳಿಸಿದೆ.
ಅಮೇರಿಕಾದ ವಾಣಿಜ್ಯ ಚೇಂಬರ್ನ ಜಾಗತಿಕ ಬೌದ್ಧಿಕ ಆಸ್ತಿ ಕೇಂದ್ರ (ಜಿಪಿಐಸಿ)ಯ 5ನೇ ಆವೃತ್ತಿಯ ವಾರ್ಷಿಕ ಐಪಿ ಸೂಚ್ಯಂಕ ‘ದ ರೂಟ್ಸ್ ಆಫ್ ಇನ್ನೋವೇಷನ್’ ಪ್ರಕಾರ ಭಾರತದ ಸಾಧನೆಯಲ್ಲಿ ಕೊಂಚ ಸುಧಾರಣೆ ಕಂಡಿದೆ ಎಂದು ತಿಳಿಸಿದೆ. ಕಳೆದ 4 ವರ್ಷಗಳಲ್ಲಿ ಭಾರತ ಈ ಸೂಚ್ಯಂಕದ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿತ್ತು ಎಂದು ಅದು ತಿಳಿಸಿದೆ.
ಭಾರತದ ಬೌದ್ಧಿಕ ಆಸ್ತಿ ನೀತಿ (ಐಪಿಆರ್) ಮತ್ತು ಹಕ್ಕುಪತ್ರ ನೀತಿ ಅದರ ನಾವೀನ್ಯತೆ ಅಥವಾ ಆವಿಷ್ಕಾರಗಳಿಗೆ ಸವಾಲಾಗಿವೆ ಎಂದು ಅಮೇರಿಕಾದ ವಾಣಿಜ್ಯ ಚೇಂಬರ್ನ ವರದಿ ಹೇಳಿದೆ.
45 ರಾಷ್ಟ್ರಗಳ ಪಟ್ಟಿಯಲ್ಲಿ 8.4 ಅಂಕಗಳೊಂದಿಗೆ ಭಾರತ 43ನೇ ಸ್ಥಾನದಲ್ಲಿದ್ದರೆ ಅಮೇರಿಕಾ 32.6 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದೆ.
ಯುನೈಟೆಡ್ ಕಿಂಗ್ಡಮ್ 32.4 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದ್ದರೆ, ಜರ್ಮನಿ 31.9, ಜಪಾನ್ 31.3 ಹಾಗೂ ಸ್ವೀಡನ್ 31 ಅಂಕಗಳನ್ನು ಪಡೆದಿವೆ.
ಚೀನಾ 14.83 ಅಂಕಗಳನ್ನು ಪಡೆದರೆ, ಪಾಕಿಸ್ಥಾನ 8.37 ಅಂಕಗಳೊಂದಿಗೆ 44ನೇ ಸ್ಥಾನದಲ್ಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.