ನವದೆಹಲಿ: ಕೇಂದ್ರ ಸರ್ಕಾರದ ಎರಡು ಪ್ರೋತ್ಸಾಹಕ ಯೋಜನೆಗಳಾದ ‘ಲಕ್ಕಿ ಗ್ರಾಹಕ್ ಯೋಜನೆ’ ಹಾಗೂ ‘ಡಿಜಿಧನ್ ವ್ಯಾಪಾರ್ ಯೋಜನೆ’ ಅಡಿಯಲ್ಲಿ ಫೆಬ್ರವರಿ 7, 2017ರಂದು 7.6 ಲಕ್ಷ ಗ್ರಾಹಕರು ಹಾಗೂ ವ್ಯಾಪಾರಿಗಳು 117.4 ಕೋಟಿ ರೂ. ಬಹುಮಾನ ಪಡೆದಿದ್ದಾರೆ ಎಂದು ನೀತಿ ಆಯೋಗ ತಿಳಿಸಿದೆ.
ಈ ಯೋಜನೆಯಲ್ಲಿ ಗ್ರಾಹಕರು ಸಕ್ರಿಯವಾಗಿ ಭಾಗವಹಿಸಿದ್ದು, ಮಹಾರಾಷ್ಟ್ರ, ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡು ಮತ್ತು ಉತ್ತರ ಪ್ರದೇಶ ಈ ಅಗ್ರ ಐದು ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಬಹುಮಾನಗಳನ್ನು ಪಡೆದಿದ್ದಾರೆ ಎಂದು ನೀತಿ ಆಯೋಗ ಹೇಳಿದೆ.
ಬಹುತೇಕ ವಿಜೇತರು 21ರಿಂದ 30 ವರ್ಷ ವಯೋಮಾನದವರಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಈ ಯೋಜನೆಗಳನ್ನು ಡಿಸೆಂಬರ್ 25, 2016ರಂದು ಬಿಡುಗಡೆ ಮಾಡಲಾಗಿದ್ದು, ಎಪ್ರಿಲ್ 14, 2017ರ ವರೆಗೆ ಇರಲಿದೆ.
ರುಪೇ ಕಾರ್ಡ್, ಭೀಮ್ ಆ್ಯಪ್, ಯುಪಿಐ, ಯುಎಸ್ಎಸ್ಡಿ ಆಧಾರಿತ ಸೇವೆ ಹಾಗೂ ಆಧಾರ್ ಆಧಾರಿತ ಪಾವತಿ ಸೇವೆಗಳನ್ನು ಬಳಸುವ ಗ್ರಾಹಕರು ಮತ್ತು ವ್ಯಾಪಾರಸ್ಥರು ದೈನಂದಿನ ಮತ್ತು ಸಾಪ್ತಾಹಿಕ ಲಕ್ಕಿ ಡ್ರಾ ಬಹುಮಾನಗಳನ್ನು ಪಡೆಯಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.