ಧಾರವಾಡ: ನಗರದಲ್ಲಿ ನಡೆಯುತ್ತಿರುವ ರಾಜ್ಯ ಓಲಂಪಿಕ್ನಲ್ಲಿ ಮಹಿಳೆಯರ ವಿಭಾಗದ ಭಾರ ಎತ್ತುವ ಸ್ಪರ್ಧೆಯಲ್ಲಿ ಬೆಂಗಳೂರಿನ ಕ್ರೀಡಾ ಪ್ರಾಧಿಕಾರದ ತಾಸನಾ ಚಾನು ಅವರು 181 ಕೆ.ಜಿ. ತೂಕ ಎತ್ತುವ ಮೂಲಕ ಕಳೆದ ಬಾರಿಯ ಮಂಡ್ಯ ಒಲಿಂಪಿಕ್ ಕ್ರೀಡಾಕೂಟದ ದಾಖಲೆಯನ್ನು ಅಳಿಸಿ ಹಾಕಿದರು.
ಮೂಡಬಿದರೆಯ ಆಳ್ವಾಸ್ನ ರಿತಿಕಾ 126 ಕೆ.ಜಿ. ತೂಕವೆತ್ತಿ ರಜತ ಮತ್ತು ಎಸ್.ಡಿ.ಎಂ.ಸ್ಪೋರ್ಟ್ಸ್ನ ಅರ್ಚನಾ ಕಂಚಿನ ಪದಕ ಗಳಿಸಿದರು.
೫೮ ಕೆ.ಜಿ. ವಿಭಾಗದಲ್ಲಿ ಗದಗಿನ ಜೈ ಹನುಮಾನ್ ಸ್ಪೋರ್ಟ್ಸ್ ಕ್ಲಬ್ನ ಲಾವಣ್ಯ ರೈ ಅವರು 119 ಕೆ.ಜಿ. ಸ್ಯ್ನಾಕ್ ಮತ್ತು ಜೆರ್ಕ್ ತೂಕವೆತ್ತಿ ಮೊದಲ ಸ್ಥಾನ ಪಡೆದರು. ಮೂಡಬಿದರೆಯ ಆಳ್ವಾಸ್ನ ಸೃತಿ ಅವರು 105 ಕೆ.ಜಿ. ಭಾರವೆತ್ತಿ 2ನೇ ಸ್ಥಾನ ಗಳಿಸಿದರೆ ಎಸ್.ಡಿ.ಎಂ.ಸ್ಪೋರ್ಟ್ಸ್ನ ಮಂದಾರಾ ಅವರು 3ನೇ ಸ್ಥಾನಕ್ಕೆ ಸಮಾಧಾನಪಟ್ಟರು.
ಇದಕ್ಕೂ ಮುನ್ನ ೪೮ ಕೆ.ಜಿ. ವಿಭಾಗದಲ್ಲಿ ಬೆಂಗಳೂರಿನ ಕ್ರೀಡಾ ಪ್ರಾಧಿಕಾರದ ಕೀರ್ತಿ 119 ಕೆ.ಜಿ. ತೂಕವೆತ್ತಿ ಚಿನ್ನ ಗೆದ್ದರು. ಬೆಳಗಾವಿಯ ಪವಿತ್ರಾ ಎರಡನೇಯ ಸ್ಥಾನ ಪಡೆದರು. ನಾಲ್ಕು ಜನ ಸ್ಪರ್ಧಿಗಳಿದ್ದ 48 ಕೆ.ಜಿ. ವಿಭಾಗದಲ್ಲಿ ಮೂಡಬಿದರೆಯ ಆಳ್ವಾಸ್ನ ಪೂಜಾ ಪೂಜಾರಿ ಅವರು ಸ್ನ್ಯಾಚ್ನಲ್ಲಿ ಹಾಗೂ ಬೆಂಗಳೂರಿನ ಸಾಯ್ ಕೇಂದ್ರದ ಯುಕ್ತಿಕಾ ಅವರು ಜೆರ್ಕ್ನಲ್ಲಿ ತೂಕವೆತ್ತುವಲ್ಲಿ ವಿಫಲರಾದ್ದರಿಂದ ಸ್ಪರ್ಧೆಯಲ್ಲಿ ಚಿನ್ನ ಮತ್ತು ರಜತ ಪದಕ ಮಾತ್ರ ಘೋಷಿಸಬೇಕಾಯಿತು.
೫೩ ಕೆ.ಜಿ. ವಿಭಾಗದಲ್ಲಿ ಬೆಂಗಳೂರಿನ ಕ್ರೀಡಾ ಪ್ರಾಧಿಕಾರದ ಬಿ. ಲಕ್ಷ್ಮೀ 106 ಕೆ.ಜಿ. ಭಾರ ಎತ್ತುವದರೊಂದಿಗೆ ಚಿನ್ನ ಗಳಿಸಿದರು. ಮೂಡಬಿದರೆಯ ಆಳ್ವಾಸ್ನ ಪ್ರೀತಿಕಾ 107 ಕೆ.ಜಿ. ಭಾರವೆತ್ತಿ ರಜತ ಹಾಗೂ ಜೈ ಹನುಮಾನ ಕ್ಲಬ್ನ ಮೋಕ್ಷಾ 106 ಕೆ.ಜಿ. ತೂಕವೆತ್ತಿ ಕಂಚಿನ ಪದಕ ಪಡೆದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.