ಧಾರವಾಡ: ರಾಜ್ಯ ಓಲಂಪಿಕ್ ಕ್ರೀಡಾಕೂಟದ ಮೊದಲ ದಿನ ಶುಕ್ರವಾರ ನಡೆದ ಭಾರ ಎತ್ತುವ ಸ್ಪರ್ಧೆಯಲ್ಲಿ ಡಿ.ಕೆ (ದ.ಕನ್ನಡ) ಲಿಫ್ಟರ್ಸ್ ಪ್ರಾಬಲ್ಯ ಮೆರೆದರು.
ದ.ಕನ್ನಡದ ಕುಸ್ತಿ ಪಟುಗಳು ಎಲ್ಲರೂ ಎಸ್ಡಿಎಂ ಸ್ಪೋರ್ಟ್ಸ್ ಕ್ಲಬ್ನವರು. ಮೊದಲ ದಿನ ನಡೆದ ಐದೂ ವಿಭಾಗಗಳಲ್ಲಿ ಚಿನ್ನ ಪಡೆಯುವುದಲ್ಲದೇ, ಮಂಡ್ಯ ಮೈಸೂರಿನಲ್ಲಿ 8 ವರ್ಷಗಳ ಹಿಂದೆ ನಡೆದ 2 ನೇ ರಾಜ್ಯಮಟ್ಟದ ಓಲಂಪಿಕ್ಸ್ನಲ್ಲಿ ತೋರಿದ ಸಾಧನೆಯನ್ನು ಇನ್ನಷ್ಟು ಉತ್ತಮಗೊಳಿಸಿಕೊಂಡರು.
ಗುರುರಾಜ ಎಂಬುವರು 56 ಕೆ.ಜಿ ಸ್ಪರ್ಧೆ ವಿಭಾಗದಲ್ಲಿ ಒಟ್ಟು 240 ಕೆ.ಜಿ (ಸ್ನ್ಯಾಚ್-೧೦೫ಕೆಜಿ + ಜರ್ಕ್-೧೩೫ ಕೆಜಿ) ಭಾರ ಹೊತ್ತಿದ್ದು, ಮಂಡ್ಯದಲ್ಲಿ ನಡೆದ ಓಲಂಪಿಕ್ನಲ್ಲಿ ಅಬಿನ್ ಸಿಂಗ್ ಅವರ ಹೆಸರಲ್ಲಿದ್ದ 187 ಕೆ.ಜಿ ದಾಖಲೆಯನ್ನು ಅಳಿಸಿಹಾಕಿದರು.
62 ಕೆ.ಜಿ ವಿಭಾಗದಲ್ಲಿ ಮಂಜುನಾಥ ಮರಟ್ಟಿ ಒಟ್ಟು 250 ಕೆ.ಜಿ ಭಾರ ಎತ್ತುವ ಮೂಲಕ ಸಂತೋಷ್ ಕುಮಾರ್ ಹೆಚ್.ವಿ ಅವರ ಹೆಸರಿನಲ್ಲಿದ್ದ 219 ಕೆ.ಜಿ ದಾಖಲೆಯನ್ನು ಮುರಿದರು.
69 ಕೆ.ಜಿ ವಿಭಾಗದಲ್ಲಿ ಸಂತೋಷ್ ಕುಮಾರ್ (238 ಕೆ.ಜಿ.), 77 ಕೆ.ಜಿ.ವಿಭಾಗದಲ್ಲಿ ಅರುಣ್ (293 ಕೆ.ಜಿ) ಹಾಗೂ 85 ಕೆ.ಜಿ ಭಾರ ಎತ್ತುವ ಸ್ಪರ್ಧೆಯಲ್ಲಿ ಹರ್ಷ ಡಿ.ಆರ್. ಇವರು ಚಿನ್ನದ ಪದಕ ತಮ್ಮದಾಗಿಸಿಕೊಂಡರು.
ಫಲಿತಾಂಶ
56 ಕೆ.ಜಿ: ಪ್ರಥಮ ಸ್ಥಾನ ಗುರುರಾಜ(ಎಸ್ಡಿಎಂ ಸ್ಪೋರ್ಟ್ಸ್ ಕ್ಲಬ್, 240 ಕೆ.ಜಿ), ದ್ವಿತೀಯ ಸ್ಥಾನ ಕೃಷ್ಣಾ (ದಾವಣಗೆರೆ) ಹಾಗೂ ತೃತೀಯ ಸ್ಥಾನವನ್ನು ಪಡೆದರು.
62 ಕೆ.ಜಿ: ಪ್ರಥಮ ಸ್ಥಾನವನ್ನು ಮಂಜುನಾಥ ಮಾರಟ್ಟಿ( ಎಸ್ಡಿಎಂ ಸ್ಪೋರ್ಟ್ಸ್ ಕ್ಲಬ್. ದ.ಕನ್ನಡ 250 ಕೆ.ಜಿ), ನವೀನ್ ಚಂದ್ರ( ಆಳ್ವಾಸ್ ಮೂಡಬಿದ್ರಿ) ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ದೇವೇಂದ್ರ (ಜೈ ಹನುಮಾನ್ ಸ್ಪೋರ್ಟ್ಸ್ ಕ್ಲಬ್. ಗದಗ) ಪಡೆಯುವಲ್ಲಿ ಯಶಸ್ವಿಯಾದರು.
69 ಕೆ.ಜಿ: ಪ್ರಥಮ ಸ್ಥಾನವನ್ನು ಸಂತೋಷ್ ಕುಮಾರ್(ಎಸ್ಡಿಎಂ ಸ್ಪೋರ್ಟ್ಸ್ ಕ್ಲಬ್. ದ.ಕನ್ನಡ 238 ಕೆ.ಜಿ), ಪ್ರವೀಣ್ (ಆಳ್ವಾಸ್ ಮೂಡಬಿದ್ರಿ) ದ್ವಿತೀಯ ಸ್ಥಾನ ಹಾಗೂ ವಿನೋದ ಮೂಲವಂಡಿ ತೃತೀಯ ಸ್ಥಾನ ಪಡೆದರು.
77 ಕೆ.ಜಿ: ಅರುಣ್ (ಎಸ್ಡಿಎಂ ಸ್ಪೋರ್ಟ್ಸ್ ಕ್ಲಬ್. ದ.ಕನ್ನಡ 267 ಕೆ.ಜಿ) ಪ್ರಥಮ, ನವೀದ್ ಅಂಜುಮ್ (ಆಳ್ವಾಸ್ ಮೂಡಬಿದ್ರಿ) ದ್ವಿತೀಯ ಹಾಗೂ ಭರತ್ ಕೆ.ಎಸ್ ಮೂರನೇ ಸ್ಥಾನ ಪಡೆದರು.
85 ಕೆ.ಜಿ: ಹಷ್ ಡಿ.ಆರ್ (ಎಸ್ಡಿಎಂ ಸ್ಪೋರ್ಟ್ಸ್ ಕ್ಲಬ್. ದ.ಕನ್ನಡ 239 ಕೆ.ಜಿ) ಮೊದಲ ಸ್ಥಾನ ಪಡೆದರೆ, ಆರ್.ಪಿ ಪ್ರವೀಣಕುಮಾರ್ ದ್ವಿತೀಯ ಹಾಗೂ ಮಂಜುನಾಥ ( ಜೈ ಹನುಮಾನ್ ಸ್ಪೋಟ್ಸ್ ಕ್ಲಬ್, ಗದಗ) ತೃತೀಯ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.