ಹಾಂಕಾಂಗ್: ಅಮೆರಿಕಾ ಮತ್ತು ಚೀನಾ ಮಧ್ಯೆ ಸೌತ್ ಚೈನಾ ಸಮುದ್ರದ ಬಗ್ಗೆ ತಿಕ್ಕಾಟ ತಾರಕಕ್ಕೇರಿ ಮಿಲಿಟರಿ ಮುಖಾಮುಖಿಯ ಅಪಾಯ ಇದೆ ಎಂದು ಬ್ರಿಟಿಷ್ ದಿನಪತ್ರಿಕೆ ವರದಿ ಮಾಡಿದೆ.
ಮಿಲಿಟರಿ ಮುಖಾಮುಖಿಯ ಬಗ್ಗೆ ಎಚ್ಚರಿಕೆ ನೀಡಿದ್ದ ವ್ಯಕ್ತಿಯೊಬ್ಬರನ್ನು ಡೊನಾಲ್ಡ್ ಟ್ರಂಪ್ ತಮ್ಮ ಆಡಳಿತದ ಆಯಕಟ್ಟಿನ ಸ್ಥಾನಕ್ಕೆ ಕೂಡಿಸಿಕೊಂಡಿದ್ದು ಮತ್ತು ಅಮೆರಿಕಾ ರೆಕ್ಸ್ ಸ್ಟೇಟ್ ನ ಕಾರ್ಯದರ್ಶಿ ಟಿಲ್ಲಸ್ರನ್ ನೀಡಿರುವ ಹೇಳಿಕೆಗಳು ಇಂತಹ ಅಪಾಯದ ಮುನ್ನೆಚ್ಚರಿಕೆ ನೀಡಿದೆ ಎಂದು ಗಾರ್ಡಿಯನ್ ಗುರುವಾರ ವರದಿ ಮಾಡಿದೆ.
“ಏಳು ಕೃತಕ ದ್ವೀಪಗಳಿಗೆ ಚೀನಾ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ” ಎಂದು ಟಿಲ್ಲರ್ಸನ್ ಹೇಳಿದ್ದರು ಎಂದು ಗಾರ್ಡಿಯನ್ ವರದಿ ಮಾಡಿದೆ.
ಅಂತರ್ಜಾಲ ಪತ್ರಿಕೆಯೊಂದರ ಮಾಜಿ ಮುಖ್ಯಸ್ಥ ಸ್ಟೀವ್ ಬ್ಯಾನನ್ ಏಷಿಯಾದಲ್ಲಿ ಚೈನಾ ಬಲಶಾಲಿಯಾಗಿ ಬೆಳೆಯುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು ಮತ್ತು ಈಗ ಅವರು ಟ್ರಂಪ್ ಅವರ ಅಧಿಕಾರಿ ಬಳಗದಲ್ಲಿ ಪ್ರಮುಖ ಸ್ಥಾ ಅಲಂಕರಿಸಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ.
ಬ್ಯಾನನ್ ಅವರನ್ನು ರಾಷ್ಟ್ರೀಯ ಭದ್ರತಾ ಮಂಡಳಿಯ, ನಿಯಮಾವಳಿ ಸಮಿತಿಗೆ ನೇಮಿಸಲಾಗಿದ್ದು, ಟ್ರಂಪ್ ಸಹಿ ಮಾಡಿರುವ ಮುಸ್ಲಿಂ ಬಹುಸಂಖ್ಯಾತ ಏಳು ರಾಷ್ಟ್ರಗಳ ವಲಸೆ ನಿಷೇಧ ಆದೇಶಕ್ಕೆ ಕೂಡ ಇವರು ಕಾರಣಕರ್ತರು ಎನ್ನಲಾಗಿದೆ.
ಮಾರ್ಚ್ 2016 ರಲ್ಲಿ ನೀಡಿದ ರೇಡಿಯೋ ಕಾರ್ಯಕ್ರಮವೊಂದರಲ್ಲಿ ಬ್ಯಾನನ್ “ಇನ್ನು ಐದು ವರ್ಷಗಳಲ್ಲಿ ಅಮೆರಿಕಾ ಸೌತ್ ಚೈನಾ ಸಮುದ್ರದಲ್ಲಿ ಯುದ್ಧಕ್ಕೆ ಇಳಿಯುತ್ತದೆ… ಅದರ ಬಗ್ಗೆ ಯಾವುದೇ ಅನುಮಾನವಿಲ್ಲ” ಎಂದು ಹೇಳಿದ್ದು ಇಲ್ಲಿ ಉಲ್ಲೇಖನೀಯ.
ಸಂಪೂರ್ಣ ಸೌತ್ ಚೈನಾ ಸಮುದ್ರದ ಒಡೆತನವನ್ನು ಚೈನಾ ಸಾಧಿಸುತ್ತಿದ್ದು, ಹಲವಾರು ಕೃತಕ ದ್ವೀಪಗಳನ್ನು ನಿರ್ಮಿಸಿ ಮಿಲಿಟರಿಯನ್ನು ಕೂಡ ನಿಯೋಜಿಸಿದೆ. ಟ್ರಂಪ್ ಅವರು ಅಧಿಕಾರ ಸ್ವೀಕರಿಸಿದ ದಿನ ಎರಡು ದೇಶಗಳ ನಡುವೆ ಯುದ್ಧ ನಿಜವಾಗುವ ಸಾಧ್ಯತೆಯಿದೆ ಇದೆ ಎಂದು ಚೈನಾ ಮಿಲಿಟರಿ ಎಚ್ಚರಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.