ಕುವೈತ್ : ಕೆಲ ದಿನಗಳ ಹಿಂದಷ್ಟೇ ಅಮೇರಿಕಾದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಸ್ಲಿಂ ರಾಷ್ಟ್ರಗಳ ನಾಗರಿಕರ ವಲಸೆ ನಿಷೇಧಿಸಿದ ಬೆನ್ನಲ್ಲೇ ಇದೀಗ ಕುವೈತ್ 5 ರಾಷ್ಟ್ರಗಳ ನಾಗರಿಕರಿಗೆ ವೀಸಾ ನೀಡುವುದನ್ನು ನಿಷೇಧಿಸಿದೆ.
ಪಾಕಿಸ್ಥಾನ, ಇರಾಕ್, ಆಪ್ಘಾನಿಸ್ಥಾನ, ಸಿರಿಯಾ ಮತ್ತು ಇರಾನ್ ರಾಷ್ಟ್ರಗಳ ನಾಗರಿಕರಿಗೆ ವೀಸಾ ನೀಡುವುದನ್ನು ಕುವೈತ್ ನಿಷೇಧಿಸಿದೆ ಎನ್ನಲಾಗಿದೆ.
ಇಸ್ಲಾಮಿಕ್ ಉಗ್ರಗಾಮಿಗಳು ವಲಸೆ ಬರುವುದನ್ನು ತಡೆಯುವ ಕ್ರಮವಾಗಿ ಈ 5 ರಾಷ್ಟ್ರಗಳ ನಾಗರಿಕರಿಗೆ ವೀಸಾ ನೀಡುವುದನ್ನು ಕುವೈತ್ ನಿಷೇಧಿಸಿದೆ ಎಂದು ಸ್ಫುಟ್ನಿಕ್ ಇಂಟರ್ನ್ಯಾಷನಲ್ ವರದಿ ಮಾಡಿದೆ.
ಭಯೋತ್ಪಾದನೆಯ ಬೆದರಿಕೆ ಹಿನ್ನಲೆಯಲ್ಲಿ ಅಮೇರಿಕಾ ಇರಾಕ್, ಸಿರಿಯಾ, ಸುಡಾನಮ್, ಲಿಬಿಯಾ, ಇರಾನ್, ಯೆಮನ್ ಮತ್ತು ಸೋಮಾಲಿಯಾ ದೇಶಗಳ ಪ್ರಜೆಗಳು ವಲಸೆ ಬರುವುದನ್ನು ನಿಷೇಧಿಸಿತ್ತು.
ಆದರೆ ಟ್ರಂಪ್ ಸಿರಿಯಾ ಪ್ರಜೆಗಳು ಅಮೇರಿಕಾಕಕ್ಕೆ ಬರದಂತೆ ನಿಷೇಧಿಸುವ ಮೊದಲೇ ಕುವೈತ್ 2011 ರಲ್ಲಿ ಸಿರಿಯಾ ನಾಗರಿಕರ ವೀಸಾಗಳನ್ನು ವಜಾಗೊಳಿಸಿತ್ತು.
2015 ರಲ್ಲಿ ಶಿಯಾ ಮಸೀದಿಯೊಂದರ ಮೇಲೆ ದಾಳಿ ನಡೆಸಿದ ಪರಿಣಾಮ ಹಲವು ನಾಗರಿಕರ ಸಾವು ಸಂಭವಿಸಿತ್ತು. ತದನಂತರ ಕಠಿಣ ಕಾನೂನು ಜಾರಿಗೆ ತಂದು ಸಿರಿಯಾ ಪ್ರಜೆಗಳಿಗೆ ವೀಸಾ ನೀಡುವುದನ್ನು ನಿರಾಕರಿಸಲಾಗಿತ್ತು. ಈ ರೀತಿಯ ಕಠಿಣ ನಿಯಮಗಳನ್ನು ಹೊಂದಿದ್ದರ ಪರಿಣಾಮವಾಗಿ ವಲಸಿಗರಿಗೆ ಕುವೈತ್ ವಾಸಿಸಲು ಅತಿ ಕೆಟ್ಟ ನಗರ ಎಂದು 2016 ರ ಸಮೀಕ್ಷೆಯೊಂದು ಹೇಳಿತ್ತು.
ಇದೀಗ 5 ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳ ಪ್ರಜೆಗಳಿಗೆ ವೀಸಾ ನೀಡುವುದನ್ನು ಕುವೈತ್ ನಿಷೇಧಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.