ನವದೆಹಲಿ: ತೆರಿಗೆಯಿಂದ ವಿನಾಯ್ತಿ ಬಯಸಿದಲ್ಲಿ ರಾಜಕೀಯ ಪಕ್ಷಗಳು ಪ್ರತಿವರ್ಷ ಡಿಸೆಂಬರ್ ಒಳಗೆ ಆಡಿಟ್ ರಿಟರ್ನ್ಸ್ ಫೈಲ್ ಮಾಡಬೇಕೆಂದು ಕೇಂದ್ರ ಸರ್ಕಾರ ಹೇಳಿದೆ.
ರಾಜಕೀಯ ಪಕ್ಷಗಳಿಗೆ ಬರುವ ದೇಣಿಗೆಯಲ್ಲಿ ಹಣ ನೀಡುವವರ ವಿಳಾಸವನ್ನು ಗೌಪ್ಯ ಇಡಲಾಗುವುದು ಎಂದು ಕೇಂದ್ರ ಕಂದಾಯ ಇಲಾಖೆ ಕಾರ್ಯದರ್ಶಿ ಹಸ್ಮುಖ್ ಅದಿಯಾ ಹೇಳಿದ್ದಾರೆ.
ವಿತ್ತ ಸಚಿವ ಅರುಣ್ ಜೇಟ್ಲಿ ಮಂಡಿಸಿದ ಬಜೆಟ್ ವೇಳೆ ರಾಜಕೀಯ ಪಕ್ಷಗಳು 2 ಸಾವಿರ ರೂಪಾಯಿಗಿಂತ ಹೆಚ್ಚಿನ ಹಣವನ್ನು ನಗದು ರೂಪದಲ್ಲಿ ಸ್ವೀಕರಿಸುವಂತಿಲ್ಲ ಎಂದು ನಿಯಮ ದಾರಿಗೆ ತರಲಾಗಿದೆ. ಈ ಹಿನ್ನೆಲೆಯಲ್ಲಿ ದೇಣಿಗೆದಾರರು ನೀಡುವ ಹಣವನ್ನು ಚೆಕ್ ಅಥವಾ ಡಿಜಿಟಲ್ ಮಾದರಿಯಲ್ಲಿ ಪಡೆಯಬಹುದು.
ರಾಜಕೀಯ ಪಕ್ಷಗಳು 20 ಸಾವಿರ ರೂಪಾಯಿವರೆಗೂ ದೇಣಿಗೆಯನ್ನು ನಗದು ರೂಪದಲ್ಲಿ ಇದುವರೆಗೂ ಸ್ವೀಕರಿಸಬಹುದಿತ್ತು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತಿದ್ದುಪಡಿ ನಿಯಮದ ಪ್ರಕಾರ ದೇಣಿಗೆ ನೀಡುವವರು ಚುನಾವಣಾ ಬಾಂಡ್ ಖರೀದಿಸಬಹುದು. ದೇಣಿಗೆದಾರರು ಮಾನ್ಯತೆ ಪಡೆದ ಬ್ಯಾಂಕ್ ಗಳಲ್ಲಿ ಚುನಾವಣಾ ಬಾಂಡ್ ಖರೀದಿಸಲು ಚೆಕ್ ಅಥವಾ ಡಿಜಿಟಲ್ ಪೇಮೆಂಟ್ ಮೂಲಕ ಮಾಡಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.