ನವದೆಹಲಿ: ಕೇಂದ್ರ ಸರ್ಕಾರ ಪ್ರಸ್ತುತ ಬಜೆಟ್ನಲ್ಲಿ ಆದಾಯ ತೆರಿಗೆ ಮಿತಿಯನ್ನು ಏರಿಕೆ ಮಾಡದಿದ್ದರೂ, ತೆರಿಗೆ ದರವನ್ನು ಇಳಿಸುವ ಮೂಲಕ ಆದಾಯ ತೆರಿಗೆ ಪಾವತಿದಾರರಿಗೆ ವರದಾನವಾಗಿ ಪರಿಣಮಿಸಿದೆ.
3 ಲಕ್ಷದವರೆಗೆ ಯಾವುದೇ ಆದಾಯ ತೆರಿಗೆ ಇಲ್ಲ. 3 ರಿಂದ 5 ಲಕ್ಷ ಪಾವತಿಗೆ ಇದ್ದ ಶೇ.10 ರಷ್ಟು ಆದಾಯ ತೆರಿಗೆ ದರವನ್ನು ಶೇ.5 ಕ್ಕೆ ಇಳಿಸಲಾಗಿದೆ. 5 ರಿಂದ 10 ಲಕ್ಷ ಆದಾಯಕ್ಕೆ ಶೇ.20 ರಷ್ಟು ತೆರಿಗೆ, 10 ಲಕ್ಷಕ್ಕಿಂತ ಹೆಚ್ಚು ಆದಾಯ ಹೊಂದಿರುವವರಿಗೆ ಶೇ.30 ರಷ್ಟು ತೆರಿಗೆ ವಿಧಿಸಲಾಗಿದೆ. ವಾರ್ಷಿಕ 50 ಲಕ್ಷದಿಂದ 1 ಕೋಟಿ ಆದಾಯ ಹೊಂದಿರುವವರಿಗೆ ಶೇ.10 ರಷ್ಟು ಹೆಚ್ಚುವರಿಯಾಗಿ ಸರ್ಚಾರ್ಜ್ ಹೇರಿಕೆ. 1 ಕೋಟಿ ಆದಾಯ ಮೇಲ್ಪಟ್ಟವರಿಗೆ ಶೇ.15 ರಷ್ಟು ಸರ್ಚಾರ್ಜ್ ಕಡ್ಡಾಯಗೊಳಿಸಲಾಗಿದೆ.
ಜಿಎಸ್ಟಿ ಅನುಷ್ಠಾನಕ್ಕೆ ಸಲ್ಲಿಸಿದ್ದ ಶಿಫಾರಸುಗಳನ್ನು ಸಮಿತಿಯು ಅಂತಿಮಗೊಳಿಸಿದೆ. ಜಿಎಸ್ಟಿ ಜಾರಿಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆದಾಯ ತೆರಿಗೆ ಹೆಚ್ಚು ಸಂಗ್ರಹವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ರಾಜಕೀಯ ಪಕ್ಷಗಳ ದೇಣಿಗೆ
ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವುದಕ್ಕೂ ಹಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಯಾವುದೇ ಪಕ್ಷ 2 ಸಾವಿರಕ್ಕಿಂತಲೂ ಹೆಚ್ಚು ದೇಣಿಗೆಯನ್ನು ನಗದು ರೂಪದಲ್ಲಿ ಪಡೆಯುವಂತಿಲ್ಲ. ಚೆಕ್ ಅಥವಾ ಡಿಜಿಟಲ್ ಮೂಲಕ ದೇಣಿಗೆ ಪಾವತಿಯಾಗಿರಬೇಕು. ಪಕ್ಷಗಳೂ ಕಾಲಕಾಲಕ್ಕೆ ಆದಾಯ ತೆರಿಗೆ ತುಂಬುವ ಕುರಿತು ನಿಯಮ ರೂಪಿಸುವ ಸಾಧ್ಯತೆ.
ಹೀಗೇ ರಾಜಕೀಯ ಪಕ್ಷಗಳ ಲೆಕ್ಕಾಚಾರವೂ ಕೂಡಾ ಪಕ್ಕಾ ಆಗಿರಬೇಕೆಂಬುದು ಪ್ರಸ್ತುತ ಬಜೆಟ್ನ ಪ್ರಮುಖ ಅಂಶ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.