ನವದೆಹಲಿ: ಭಾರತ ಈಗಾಗಲೇ ಬದಲಾವಣೆಯ ದಿಕ್ಕಿನತ್ತ ಸಾಗುತ್ತಿದೆ. ದೇಶ ಪ್ರಗತಿಯ ಹಾದಿಯಲ್ಲಿದೆ. ಇದಕ್ಕೆ ಇನ್ನಷ್ಟು ತೀವ್ರತೆಯನ್ನು ತರುವಲ್ಲಿ ಪ್ರಸ್ತುತ ಬಜೆಟ್ ಸಹಕಾರಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು 2017-18 ರ ಮುಂಗಡ ಪತ್ರವನ್ನು ಪ್ರಶಂಸಿಸಿದ್ದಾರೆ.
ಇದು ನಮ್ಮ ಕನಸನ್ನು ಸಾಕಾರಗೊಳಿಸುವ ಭವಿಷ್ಯದ ಬಜೆಟ್ ಎಂದರೆ ತಪ್ಪಾಗಲಾರದು ಎಂದ ಅವರು, ಈ FUTURE ಎಂಬ ಪದವನ್ನು ತಮ್ಮದೇ ಶೈಲಿಯಲ್ಲಿ ಅರ್ಥೈಸಿದರು.
F- ಫಾರ್ಮರ್ (ರೈತ), U- ಅಂಡರ್ ಪ್ರಿವಿಲೈಜ್ (ಶೋಷಿತ ವರ್ಗ), T – ಟ್ರಾನ್ಸ್ಪರೆನ್ಸಿ (ಪಾರದರ್ಶಕತೆ), U- ಅರ್ಬನ್ ರಿನುಜ್ಯುಯೇಷನ್ (ನಗರ ಪುನರುತ್ಥಾನ), R – ರೂರಲ್ ಡೆವಲಪ್ಮೆಂಟ್ (ಗ್ರಾಮೀಣಾಭಿವೃದ್ಧಿ) ಹಾಗೂ E – ಎಂಪ್ಲಾಯಮೆಂಟ್ (ಉದ್ಯೋಗ) ಆಗಿದೆ ಎಂದು ಅವರು ಫ್ಯೂಚರ್ ಪದವನ್ನು ವಿಶ್ಲೇಷಿಸಿದರು.
ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೂ ಆದ್ಯತೆ ನೀಡಿರುವ ಈ ಬಜೆಟ್, ದೇಶದ ಆರ್ಥಿಕತೆಯನ್ನು ಬಲಪಡಿಸುವಲ್ಲಿ ಸಹಕಾರಿಯಾಗಿದೆ. ಕೇಂದ್ರ ಬಜೆಟ್ನೊಂದಿಗೆ ರೈಲ್ವೆ ಬಜೆಟ್ ವಿಲೀನಗೊಳಿಸಿದ್ದು ಐತಿಹಾಸಿಕ ನಿರ್ಧಾರ. ಕಪ್ಪು ಹಣ ಹಾಗೂ ಭ್ರಷ್ಟಾಚಾರ ವಿರುದ್ಧದ ಹೋರಾಟ ನಿರಂತರ ಎಂದು ಪ್ರಧಾನಿ ಮೋದಿ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.