ನವದೆಹಲಿ: ಬಸ್ಸು , ವಿಮಾನಗಳು ಅಷ್ಟೇ ಏಕೆ ? ಹಲವು ಐತಿಹಾಸಿಕ ಸಂಗತಿಗಳಿಗೆ ಕಾರಣವಾದ 2017-18 ರ ಸಾಮಾನ್ಯ ಬಜೆಟ್ನಲ್ಲಿ ರೈಲೂ ಬಂದಿದೆ.
ಮೊದಲೇ ಕೇಂದ್ರ ಘೋಷಿಸಿದಂತೆ ಸಾಮಾನ್ಯ ಬಜೆಟ್ನಲ್ಲಿ ರೈಲ್ವೇ ಬಜೆಟ್ ವಿಲೀನಗೊಳಿಸಿ ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡಿಸಿದ್ದು ಇದು ಪ್ರಥಮ.
ರೈಲ್ವೆ ಮಾರ್ಗ ಅಭಿವೃದ್ಧಿಗೆ 1.31 ಲಕ್ಷ ಕೋಟಿ ಅನುದಾನ, ದೂರು ನೀಡಿದ ಮರುಕ್ಷಣವೇ ಶುಚಿತ್ವಕ್ಕೆ ವ್ಯವಸ್ಥೆ, ರೈಲ್ವೆ ಸುರಕ್ಷತೆಗೆ ಹೆಚ್ಚಿನ ಆದ್ಯತೆ, ಸರ್ವೀಸ್ ಚಾರ್ಜ್ ರಹಿತ ಇ-ಟಿಕೆಟ್, ರೈಲುಗಳಲ್ಲಿ ಪರಿಸರ ಸ್ನೇಹಿ ಶೌಚಾಲಯಗಳು, ತೀರ್ಥಯಾತ್ರೆಗಳಿಗೆ ವಿಶೇಷ ರೈಲು ಹೀಗೆ ವಿಭಿನ್ನ ರೀತಿಯಲ್ಲಿ ರೈಲ್ವೆ ಅಭಿವೃದ್ಧಿಗೆ ಪ್ರಸ್ತುತ ಬಜೆಟ್ ಗಮನಹರಿಸಿದೆ.
ಸಾರಿಗೆ ಕ್ಷೇತ್ರಕ್ಕೆ ಒಟ್ಟು 2.41 ಲಕ್ಷ ಕೋಟಿ ಹಣ ಮೀಸಲಿಡಲಾಗಿದ್ದು, ಕರಾವಳಿ ಭಾಗಗಳಲ್ಲಿನ ಹೆದ್ದಾರಿಗಳ ಸುಧಾರಣೆಗೆ ಆದ್ಯತೆ ನೀಡಲಾಗಿದ. ಪುಟ್ಟ ನಗರಗಳಲ್ಲೂ ಇನ್ನು ಲೋಹದ ಹಕ್ಕಿಗಳ ನಿಲ್ದಾಣ ನಿರ್ಮಾಣ ಮಾಡುವುದಾಗಿಯೂ ಬಜೆಟ್ನಲ್ಲಿ ಹೇಳಲಾಗಿದೆ.
ಪ್ರತ್ಯೇಕ ಬಜೆಟ್ನ ಸಿದ್ಧತೆಗೆ ಬೇಕಾದ ಸಮಯ, ಹಣವನ್ನು ಉಳಿಸುವಲ್ಲಿಯೂ ಈ ಬಜೆಟ್ನ ವಿಲೀನ ಪ್ರಕ್ರಿಯೆ ಸಹಕಾರಿಯಾಗಿದೆ ಎನ್ನಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.