ನವದೆಹಲಿ: ರೈತರು, ಕೃಷಿಗೆ ಉತ್ತೇಜನ ನೀಡುತ್ತಲೇ ಹಿರಿಯ ನಾಗರಿಕರು ಹಾಗೂ ಮಹಿಳಾ ಸಬಲೀಕರಣಕ್ಕೂ ಕೇಂದ್ರ ಸಾಮಾನ್ಯ ಬಜೆಟ್ ಆದ್ಯತೆ ನೀಡಿರುವುದು ಗಮನಾರ್ಹ.
ಮನ್ರೇಗಾ ಯೋಜನೆ ಅಡಿಯಲ್ಲಿ ಮಹಿಳೆಯರ ಭಾಗೀದಾರಿಕೆಗೆ ಹೆಚ್ಚಿನ ಆದ್ಯತೆಯನ್ನು ನೀಡುವ ಮೂಲಕ ಮಹಿಳಾಪರ ಒಲವನ್ನು ತೋರಿದ ಬಜೆಟ್, ಗರ್ಭಿಣಿಯರಿಗೆ ಕೇಂದ್ರ ಸರ್ಕಾರದಿಂದ 6 ಸಾವಿರ ರೂಪಾಯಿಯನ್ನು ನೀಡುವುದಾಗಿ ಘೋಷಿಸಿದೆ.
ಮಹಿಳಾ ಕಲ್ಯಾಣಕ್ಕೆ 1.48 ಲಕ್ಷ ಕೋಟಿ ಹಣವನ್ನು ಮೀಸಲಿಡುವ ಭರವಸೆ ನೀಡಿದ ಬಜೆಟ್, ಮಹಿಳಾ ಶಕ್ತಿ ಕೇಂದ್ರಗಳ ಸ್ಥಾಪನೆಗೆ ೫೦೦ ಕೋಟಿ ಹಣವನ್ನು ತೆಗೆದಿಡುವುದಾಗಿ ಘೋಷಿಸಿರುವುದು ಪರಿಗಣಿಸಬೇಕಾದ ಸಂಗತಿ.
ಹೈನುಗಾರಿಕೆಗೆ ಹೆಚ್ಚಿನ ಆದ್ಯತೆ ನೀಡುವ ಕುರಿತು ಬಜೆಟ್ನಲ್ಲಿ ಪ್ರಸ್ತಾಪವಿದೆ. ಮಹಿಳೆಯರೂ ಕೂಡಾ ಈ ಉದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಆರ್ಥಿಕ ಸ್ವಾವಲಂಬಿತನ ಸಾದಿಸಲು ಹೆಚ್ಚಿನ ಅವಕಾಶವಿದೆ.
ರೈಲುಗಳಲ್ಲಿ ಜೈವಿಕ ಶೌಚಾಲಯ, ಗ್ರಾಮಗಳಲ್ಲಿ ಶೌಚಾಲಯ ನಿರ್ಮಾಣ ಇವೂ ಕೂಡಾ ಪರೋಕ್ಷ ಹಾಗೂ ಪ್ರತ್ಯಕ್ಷವಾಗಿ ಮಹಿಳೆಯರಿಗೆ ಅನುಕೂಲಕರವಾಗಿವೆ ಎನ್ನಬಹುದು.
ಹಿರಿಯ ನಾಗರಿಕರು
ಯುವಶಕ್ತಿಯ ಬಲವರ್ಧನೆಗೆ ಆದ್ಯತೆ ನೀಡುತ್ತಲೇ, ಹಿರಿಯರ ಯೋಗಕ್ಷೇಮದತ್ತಲೂ ಚಿತ್ತ ಹರಿಸಿದ ಬಜೆಟ್ನಲ್ಲಿ, ಆಧಾರ್ ಕಾರ್ಡ್ ಆಧಾರಿತ ಆರೋಗ್ಯ ಕಾರ್ಡ್, ಹಿರಿಯ ನಾಗರಿಕರಿಗೆ ಪಿಂಚಣಿ ಗ್ಯಾರಂಟಿ ಹಾಗೂ ಜೀವ ವಿಮೆ ಕುರಿತ ವಿಶೇಷ ಯೋಜನೆಯನ್ನು ಜಾರಿಗೆ ತರುವುದಾಗಿ ವಿಶ್ವಾಸ ವ್ಯಕ್ತವಾಗಿದೆ.
ಈ ನಿಟ್ಟಿನಲ್ಲಿ ಹಿರಿಯರ ಒಳಿತು ಹಾಗೂ ಮಹಿಳಾ ಸಬಲೀಕರಣಕ್ಕೂ ಆದ್ಯತೆ ನೀಡಿರುವ ಕೇಂದ್ರ ಬಜೆಟ್, ಮಹಿಳೆಯರ ಮನ ಗೆಲ್ಲುವ ಸಾಧ್ಯತೆ ಹೆಚ್ಚು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.