ನವದೆಹಲಿ: ಇಂದು ಲೋಕಸಭೆಯಲ್ಲಿ 2017-18 ನೇ ಸಾಲಿನ ಬಜೆಟ್ನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಮಂಡಿಸಿದರು.
ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರೈಲ್ವೆ ಬಜೆಟ್ ಮತ್ತು ಸಾಮಾನ್ಯ ಬಜೆಟ್ ಏಕಕಾಲಕ್ಕೆ ಮಂಡನೆಯಾಗಿದೆ.
ಮಂಗಳವಾರ ಕೇಂದ್ರ ಮಾಜಿ ಸಚಿವ ಇ. ಅಹಮದ್ ವಿಧಿವಶರಾದ ಹಿನ್ನಲೆಯಲ್ಲಿ ವಿರೋಧ ಪಕ್ಷಗಳು ಬಜೆಟ್ ಮಂಡನೆಗೆ ವಿರೋಧ ವ್ಯಕ್ತಪಡಿಸಿದ್ದವು. ಆದರೆ ಹಿರಿಯ ಸಚಿವರು ಹಾಗೂ ಪ್ರಧಾನಮಂತ್ರಿಯವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬಜೆಟ್ ಮಂಡಿಸುವಂತೆ ತೀರ್ಮಾನ ಕೈಗೊಂಡು, ಬಜೆಟ್ ಮಂಡನೆ ಮಾಡಲಾಯಿತು.
ಮಾಜಿ ಸಚಿವ ಇ. ಅಹಮದ್ ಅವರಿಗೆ ಒಂದು ನಿಮಿಷದ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ ನಂತರ ಬಜೆಟ್ ಕಲಾಪ ಪ್ರಾರಂಭಿಸಲಾಯಿತು.
ನಾಲ್ಕನೇ ಬಾರಿಗೆ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಮಂಡಿಸಿದ 2017-18 ನೇ ಸಾಲಿನ ಬಜೆಟ್ನ ಮುಖ್ಯಾಂಶಗಳು ಹೀಗಿವೆ.
- ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಸಲ ಫೆ.1 ರಂದು ಕೆಂದ್ರ ಬಜೆಟ್
- ಪ್ರಥಮ ಬಾರಿ ಸಾಮಾನ್ಯ ಬಜೆಟ್ನಲ್ಲಿ ವಿಲೀನಗೊಂಡ ರೈಲ್ವೆ ಬಜೆಟ್
- ಎನ್ಡಿಎ ಅವಧಿಯಲ್ಲಿ ಹಣದುಬ್ಬರ ನಿಯಂತ್ರಣಕ್ಕೆ ಬಂದಿದೆ ಎಂದ ಸಚಿವ ಜೇಟ್ಲಿ
- ಜಾಗತಿಕ ಮಟ್ಟದಲ್ಲಿ ಆರ್ಥಿಕವಾಗಿ ಭಾರತ ಮುಂದುವರಿಯುತ್ತಿದೆ : ಜೇಟ್ಲಿ
- ವಿದೇಶಿ ವಿನಿಮಯ ಹೂಡಿಕೆಯಲ್ಲಿ ಹೆಚ್ಚಳ
- ಕೃಷಿ ಕ್ಷೇತ್ರದಲ್ಲಿ ಭಾರತ ಅತ್ಯುತ್ತಮ ಪ್ರಗತಿ
- ಔದ್ಯೋಗಿಕ ಕ್ಷೇತ್ರದಲ್ಲಿ ಯುವಶಕ್ತಿಯ ಬಲವರ್ಧನೆಗೆ ಕ್ರಮ
- ನೋಟ್ ಬ್ಯಾನ್ನಿಂದ ದೇಶಕ್ಕೆ ಒಳಿತು; ಸಹಕರಿಸಿದ ಪ್ರಜೆಗೆ ವಂದನೆ ಸಲ್ಲಿಸಿದ ಜೇಟ್ಲಿ
- ಬಡವರ ಮನೆಯ ಕನಸಿಗೆ ಕೇಂದ್ರದಿಂದ ನೆರವು
- ಸಣ್ಣಕೈಗಾರಿಕೆ ಅಭಿವೃದ್ಧಿಗೆ ವಿಶೇಷ ಸಹಾಯ
- ಟೆಕ್ ಇಂಡಿಯಾ ಮುಂದಿನ ಯೋಜನೆ
- 5 ಕಡೆ ನೂತನ ಪ್ರವಾಸೋದ್ಯಮ ವಲಯಗಳ ಸ್ಥಾಪನೆ
- ಟೆಕ್ಸ್ಟೈಲ್ಸ್ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಗೆ ಯೋಜನೆ
- ತೆರಿಗೆ ಸಂಬಂಧಿಸಿದಂತೆ ಅನೇಕ ಬದಲಾವಣೆ
- ಶೈಕ್ಷಣಿಕ ಕ್ಷೇತ್ರಕ್ಕೂ ವಿಶೇಷ ಆದ್ಯತೆ
- ಅಂಚೆ ಕಚೇರಿಯಲ್ಲಿ ಪಾಸ್ಪೋರ್ಟ್ ವಿತರಣೆಗೆ ಅವಕಾಶ
- ಪೆಟ್ರೋಲ್ ಬಂಕ್, ಶಾಲೆ, ಕಾಲೇಜುಗಳಲ್ಲಿ ಡಿಜಿಟಲ್ ಪಾವತಿ ಕಡ್ಡಾಯ
- ಚಿಟ್ ಫಂಡ್ ಕ್ಷೇತ್ರದ ನಿಯಂತ್ರಣಕ್ಕೆ ಅಗತ್ಯ ಕಾನೂನು
- ವಿಜ್ಞಾನ ಕ್ಷೇತ್ರದ ಅಭಿವೃದ್ಧಿಗೂ ವಿಶೇಷ ಹಣ ಮೀಸಲು
ಕೃಷಿ ಹಾಗೂ ರೈತರು
- ರೈತರ ಆದಾಯ ಮೂಲ ದ್ವಿಗುಣಗೊಳಿಸುವ ನಿರ್ಧಾರ
- ಕೃಷಿ ಉತ್ಪಾದನೆ ಹೆಚ್ಚಾಗುವ ಸಾಧ್ಯತೆ
- ಫಸಲ್ ಬಿಮಾ ಯೋಜನೆಯಿಂದ ರೈತರಿಗೆ ಅನುಕೂಲ
- ನಿರಾಶ್ರಿತರಿಗೆ 2019ರೊಳಗೆ 1 ಕೋಟಿ ಮನೆ
- ಬೆಳೆ ವಿಮೆ ಯೋಜನೆಗೆ 9 ಸಾವಿರ ಕೋಟಿ ಮೀಸಲು
- ರೈತರ ಸಾಲದ ಮೇಲೆ 2 ತಿಂಗಳ ಬಡ್ಡಿ ವಿನಾಯಿತಿ
- ರೈತರಿಗೆ ಮಣ್ಣು ಆರೋಗ್ಯ ಕಾರ್ಡ್ ವಿತರಣೆ
- ಹಾಲು ಉತ್ಪಾದನೆ ಹೆಚ್ಚಳಕ್ಕೆ ನಬಾರ್ಡ್ನಿಂದ 8 ಸಾವಿರ ಕೋಟಿ ಬಿಡುಗಡೆ
- ಹನಿ ನೀರಾವರಿಗಾಗಿ ನಬಾರ್ಡ್ನಲ್ಲಿ ನಿಧಿ ಸ್ಥಾಪನೆ
- ಕೃಷಿ ವಿಜ್ಞಾನ ಕೇಂದ್ರಗಳ ನಿರ್ಮಾಣಕ್ಕೆ ಆದ್ಯತೆ
- ಒಂದು ಕೋಟಿ ಕುಟುಂಬಗಳನ್ನು ಬಡತನ ರೇಖೆಗಿಂತ ಮೇಲೆ ತರಲು ನಿರ್ಧಾರ
- ಗ್ರಾಮೀಣ ಭಾರತದಲ್ಲಿ ಬಡತನ ನಿರ್ಮೂಲನೆಗೆ ಕ್ರಮ
- ಒಂದು ಕೋಟಿ ಕುಟುಂಬಗಳಿಗೆ ಅಂತ್ಯೋದಯ ಕಾರ್ಡ್
- ಗ್ರಾಮೀಣ ಶಿಕ್ಷಣದಲ್ಲಿ ತಂತ್ರಜ್ಞಾನ ಅಳವಡಿಕೆಗೆ ಆದ್ಯತೆ
- ಮನ್ರೇಗಾ ಯೋಜನೆಯಡಿಯಲ್ಲಿ 10 ಲಕ್ಷ ಕೆರೆಗಳ ಅಭಿವೃದ್ಧಿಗೆ ಅನುದಾನ ಮೀಸಲು
- ನೀರಾವರಿಗೆ ದೀರ್ಘಾವಧಿ ಯೋಜನೆ, 20 ಸಾವಿರ ಕೋಟಿ ಮೀಸಲು
- ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಜಾರಿ, ಶಿಕ್ಷಣದಲ್ಲಿ ತಂತ್ರಜ್ಞಾನ ಅಳವಡಿಕೆ
- ಜಾರ್ಖಂಡ್ ಮತ್ತು ಗುಜರಾತ್ನಲ್ಲಿ ಏಮ್ಸ್ ಸ್ಥಾಪನೆ
- ಕೃಷಿ ಸಾಲದ ಮಿತಿ 10 ಲಕ್ಷ ಕೋಟಿ ಏರಿಸುವ ಭರವಸೆ
- ಪ್ರತಿ ಹಳ್ಳಿಗಳಲ್ಲೂ ಶೌಚಾಲಯ ನಿರ್ಮಾಣಕ್ಕೆ ಅಗತ್ಯ ಕ್ರಮ
- ಹಳ್ಳಿಗಳಲ್ಲಿ ಬ್ರಾಡ್ಬ್ಯಾಂಡ್ ಯೋಜನೆ
ಮಹಿಳೆಯರ ಪರ
- ಮನ್ರೇಗಾದಲ್ಲಿ ಮಹಿಳೆಯರ ಭಾಗೀದಾರಿಕೆಗೆ ಹೆಚ್ಚಿನ ಆದ್ಯತೆ
- ಗರ್ಭಿಣಿಯರಿಗೆ ಕೇಂದ್ರ ಸರ್ಕಾರದಿಂದ 6 ಸಾವಿರ ರೂಪಾಯಿ ಅನುದಾನ
- ಮಹಿಳಾ ಶಕ್ತಿ ಕೇಂದ್ರಗಳ ಸ್ಥಾಪನೆಗೆ 500 ಕೋಟಿ ಹಣ ಮೀಸಲು
- ಮಹಿಳೆಯರ ಕಲ್ಯಾಣಕ್ಕಾಗಿ ಹಣ ಮೀಸಲು
ಹಿರಿಯ ನಾಗರಿಕರಿಗೆ
- ಆಧಾರ್ ಕಾರ್ಡ್ ಆಧಾರಿತ ಆರೋಗ್ಯ ಕಾರ್ಡ್
- ಪಿಂಚಣಿ ಗ್ಯಾರಂಟಿ
- ಎಲ್ಐಸಿ ವಿಶೇಷ ಯೋಜನೆ
ರೈಲ್ವೆ ಯೋಜನೆಗಳು
- ತೀರ್ಥಯಾತ್ರೆಗಳಿಗೆ ವಿಶೇಷ ರೈಲುಗಳ ಆಯೋಜನೆ
- ರೈಲ್ವೆ ಮಾರ್ಗ ಅಭಿವೃದ್ಧಿಗೆ 1.31 ಲಕ್ಷ ಕೋಟಿ ಅನುದಾನ
- ದೂರು ನೀಡಿದ ತಕ್ಷಣ ರೈಲ್ವೆ ಬೋಗಿಗಳ ಸ್ವಚ್ಛತೆಗೆ ಅವಕಾಶ
- 2019ರೊಳಗೆ ಜೈವಿಕ ಶೌಚಾಲಯಗಳ ನಿರ್ಮಾಣ
- 3500 ಕಿ.ಮೀ ನೂತನ ರೈಲ್ವೆ ಮಾರ್ಗ ವಿಸ್ತರಣೆ
- ದಿವ್ಯಾಂಗರ ಅನುಕೂಲಕ್ಕಾಗಿ ನೂತನ ಯೋಜನೆ ಜಾರಿಗೆ
- 2020 ರೊಳಗೆ ಮಾನವ ರಹಿತ ರೈಲ್ವೆ ಕ್ರಾಸಿಂಗ್ ಯೋಜನೆ
- ರೈಲ್ವೆ ಸುರಕ್ಷತೆಗೆ ಮುಂದಿನ ವರ್ಷಕ್ಕೆ 1 ಲಕ್ಷ ಕೋಟಿ ಮೀಸಲು
- ಇ-ಟಿಕೆಟ್ ಮೇಲೆ ಯಾವುದೇ ರೀತಿಯ ಸರ್ವಿಸ್ ಚಾರ್ಜ್ ಇರುವುದಿಲ್ಲ
- ಹೊಸ ಮೆಟ್ರೊ ಯೋಜನೆ, ಉದ್ಯೋಗಾವಕಾಶ ಹೆಚ್ಚಳ
ಸಾರಿಗೆ ಕ್ಷೇತ್ರ
- ಸಾರಿಗೆ ಕ್ಷೇತ್ರಕ್ಕೆ ಒಟ್ಟು 2.41 ಲಕ್ಷ ಕೋಟಿ ಮೀಸಲು
- ಕರಾವಳಿ ಹೆದ್ದಾರಿಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ
- ಸಣ್ಣ ನಗರಗಳಲ್ಲೂ ವಿಮಾನ ನಿಲ್ದಾಣಗಳ ನಿರ್ಮಾಣ
- ವಿಮಾನ ನಿಲ್ದಾಣಗಳ ಜಾಗ ವಾಣಿಜ್ಯ ಉದ್ದೇಶಕ್ಕೆ ಬಳಕೆ
ರಾಜಕೀಯ ಪಕ್ಷಗಳ ದೇಣಿಗೆಗೆ ಕಡಿವಾಣ
- 2 ಸಾವಿರಕ್ಕಿಂತ ಹೆಚ್ಚು ಹಣವನ್ನು ಯಾವುದೇ ಪಕ್ಷ ನಗದು ರೂಪದಲ್ಲಿ ಪಡೆಯುವಂತಿಲ್ಲ
- ಪಕ್ಷಗಳು ಕಾಲಕಾಲಕ್ಕೆ ತೆರಿಗೆ ಭರಿಸುವುದು
- ಚೆಕ್, ಡಿಜಿಟಲ್ ರೂಪದಲ್ಲಿ ದೇಣಿಗೆ ಪಡೆಯಲು ಅವಕಾಶ
ಆದಾಯ ತೆರಿಗೆ
- ಆದಾಯ ತೆರಿಗೆ ಶೇ.10 ರಿಂದ 5 ಕ್ಕೆ ಇಳಿಕೆ
- 3 ಲಕ್ಷದಿಂದ 5 ಲಕ್ಷದ ವರೆಗೂ ಶೇ.5 ರಷ್ಟು ಆದಾಯ ತೆರಿಗೆ
- ಜಿಎಸ್ಟಿ ಕಾನೂನು ಜಾರಿ ಶೀಘ್ರದಲ್ಲಿ
- 50 ಲಕ್ಷಕ್ಕಿಂತ ಹೆಚ್ಚ ವಹಿವಾಟು ಹೊಂದಿರುವ ಕಂಪನಿಗಳಿಗೆ ಶೇ.5 ರಷ್ಟು ತೆರಿಗೆ
- ಆಂದ್ರಕ್ಕೆ ವಿಶೇಷ ತೆರಿಗೆ ವಿನಾಯಿತಿ ಘೋಷಣೆ
- ವಸತಿ ನಿರ್ಮಾಣದಾರರಿಗೆ ತೆರಿಗೆಯಲ್ಲಿ ವಿನಾಯಿತಿ.
ರಕ್ಷಣಾ ಕ್ಷೇತ್ರ
- ರಕ್ಷಣಾ ಇಲಾಖೆಗೆ 2.47 ಲಕ್ಷ ಕೋಟಿ ಮೀಸಲು
- ರಕ್ಷಣಾ ಕ್ಷೇತ್ರ ಹಾಗೂ ಯೋಧರಿಗೆ ನೇರ ವಿಮಾನ ಟಿಕೆಟ್ ಬುಕಿಂಗ್ ಸೌಲಭ್ಯ
ಹೊಸ ಕಾನೂನುಗಳ ಚಿಂತನೆ
- ಸಾಲ ಪಾವತಿಸದೇ ತಪ್ಪಿಸಿಕೊಂಡವರ ವಿರುದ್ಧ ಕ್ರಮ
- ವಿಜಯ್ ಮಲ್ಯ, ಲಲಿತ್ ಮೋದಿ ವಿರುದ್ಧ ಕ್ರಮ
- ಆರ್ಥಿಕ ಸುಸ್ತಿದಾರರ ಆಸ್ತಿ ವಶಪಡಿಸಿಕೊಳ್ಳಲು ಕ್ರಮ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.