ನವದೆಹಲಿ: ಫೆ.15 ರಂದು ಒಟ್ಟು 104 (ಪಿಎಸ್ಎಲ್ವಿ) ಉಪಗ್ರಹಗಳ ಬಿಡುಗಡೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಸಜ್ಜಾಗಿದೆ.
ಈ ಕುರಿತು ತಿಳಿಸಿರುವ ಇಸ್ರೋದ ಎಸ್.ಸೋಮನಾಥ ಅವರು, ಇದರಲ್ಲಿ ಎಷ್ಟು ದೇಶಗಳು ಪಾಲ್ಗೊಳ್ಳುತ್ತವೆ ಎಂದು ನಿರ್ದಿಷ್ಟವಾಗಿ ಹೇಳಿರುವುದಿಲ್ಲ. ಆದರೆ ಯುಎಸ್ ಹಾಗೂ ಜರ್ಮನಿ ಮುಂತಾದ ದೇಶಗಳು ಪಾಲ್ಗೊಳ್ಳುವುದಾಗಿ ಅವರು ತಿಳಿಸಿದ್ದಾರೆ.
ಬಿಡುಗಡೆಯಾಗಲಿರುವ 104 ಉಪಗ್ರಹಗಳಲ್ಲಿ 101 ವಿದೇಶಿ ಉಪಗ್ರಹಗಳು ಹಾಗೂ ರಕ್ಷಣಾ ಹಾಗೂ ಆಯಕಟ್ಟಿನ ಉದ್ದೇಶಕ್ಕಾಗಿ ದೂರ ಸಂವೇದಿ ಸಾಮರ್ಥ್ಯವುಳ್ಳ ಕ್ಯಾಮೆರಾ ಹೊಂದಿದ 3 ಭಾರತೀಯ ಉಪಗ್ರಹಗಳಿವೆ ಎನ್ನಲಾಗಿದೆ.
ಕಳೆದ ವರ್ಷ ಇಸ್ರೊ 22 ಉಪಗ್ರಹಗಳನ್ನು ಬಿಡುಗಡೆ ಮಾಡಿತ್ತು. ಅದೇ ಸಂದರ್ಭದಲ್ಲಿ ರಷಿಯಾ 37 ಹಾಗೂ ನಾಸಾ 29 ಉಪಗ್ರಹಗಳನ್ನು ಬಿಡುಗಡೆ ಮಾಡಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.