ವಾಷಿಂಗ್ಟನ್ : ಕೆಲವು ಮುಸ್ಲಿಂ ರಾಷ್ಟ್ರಗಳ ಪ್ರಜೆಗಳಿಗೆ ಅಮೇರಿಕಾದಲ್ಲಿ ನಿರ್ಬಂಧ ವಿಧಿಸಿದ ಹಿನ್ನಲೆಯಲ್ಲೇ, ಪಾಕಿಸ್ಥಾನವನ್ನೂ ದೂರವಿಡಲಾಗುವುದು ಎಂಬ ಸುಳಿವನ್ನು ಶ್ವೇತಭವನ ನೀಡಿದೆ.
ಇಸಿಸ್ ಉಗ್ರರನ್ನು ಅಮೇರಿಕಾದಿಂದ ಹೊರಗಿಡುವ ನಿರ್ಧಾರವನ್ನು ಕೈಗೊಂಡ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೆಲ ದಿನಗಳ ಹಿಂದೆ ಸುಡಾನ್, ಲಿಬಿಯಾ, ಇರಾನ್, ಇರಾಕ್, ಯೆಮೆನ್ ಮತ್ತು ಸೊಮಾಲಿಯಾ ನಾಗರಿಕರು ಅಮೇರಿಕಾದೊಳಕ್ಕೆ ಪ್ರವೇಶಿಸಲು ಹಲವು ಸುತ್ತಿನ ತಪಾಸಣೆ ಮತ್ತು ಕಠಿಣ ಶರತ್ತುಗಳಿಗೆ ಒಳಪಡಬೇಕು ಎಂಬ ವಿವಾದಾತ್ಮಕ ಆದೇಶಕ್ಕೆ ಸಹಿ ಹಾಕಿದ್ದರು. ಸಿರಿಯಾದ ನಾಗರೀಕರಿಗೆ ಸಂಪೂರ್ಣ ನಿಷೇಧವನ್ನು ವಿಧಿಸಿದೆ.
ಪಾಕಿಸ್ಥಾನ ಮತ್ತು ಸೌದಿ ರಾಷ್ಟ್ರಗಳು ಮುಸ್ಲಿಮೇತರ ರಾಷ್ಟ್ರಗಳಾಗಿದ್ದು ಇಲ್ಲಿನ ಜನರಿಗೂ ಅಮೇರಿಕಾ ನಿರ್ಬಂಧ ಹೇರಲಿವೆ ಎನ್ನುವ ಸುದ್ದಿಗಳು ಕೇಳಿಬರುತ್ತಿವೆ.
ಪ್ರಸ್ತುತ ಪಾಕಿಸ್ಥಾನವನ್ನು ಇರಾಕ್, ಇರಾನ್, ಸುಡಾನ್, ಲಿಬಿಯಾ, ಯೆಮನ್ ಮತ್ತು ಸೋಮಾಲಿಯಾ ರಾಷ್ಟ್ರಗಳ ಪಟ್ಟಿಗೆ ಸೇರಿಸಲಾಗಿದೆ. ಯಾವಾಗ ಬೇಕಾದರೂ ಪಾಕಿಸ್ಥಾನದ ಪ್ರಜೆಗಳ ಮೇಲೆ ನಿರ್ಬಂಧ ಹೇರುವ ಸಾಧ್ಯತೆಗಳಿವೆ ಎಂಬುದನ್ನು ಶ್ವೇತಭವನದ ಅಧಿಕಾರಿಗಳು ಹೇಳಿದ್ದಾರೆ ಎನ್ನಲಾಗಿದೆ.
ಭಯೋತ್ಪಾದನಾ ಕೃತ್ಯಗಳು ಮತ್ತು ಬೆದರಿಕೆಗಳು ಅತಿ ಹೆಚ್ಚು ನಡೆಯುತ್ತಿರುವ ಈ 7 ರಾಷ್ಟ್ರಗಳ ಮೇಲೆ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳಲಾಗಿದೆ. ಅಮೇರಿಕಾ ಪ್ರಜೆಗಳ ಸುರಕ್ಷತೆ ನಮಗೆ ಮುಖ್ಯವಾಗಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಬಹಳಷ್ಟು ನಿರೀಕ್ಷೆಯೊಂದಿಗೆ ಜನರು ಆಯ್ಕೆ ಮಾಡಿದ್ದಾರೆ. ಇತರೆ ದೇಶಗಳ ವಲಸಿಗರಿಂದ ನಮ್ಮ ಜನರಿಗೆ ತೊಂದರೆಯಾಗುವುದು ನಮಗಿಷ್ಟವಿಲ್ಲ. ಕೆಲ ರಾಷ್ಟ್ರಗಳಿಂದ ನಮಗೆ ತೊಂದರೆಯಾಗಬಹುದು ಎಂಬುದು ಗೊತ್ತಿದ್ದರೂ ನಾವು ಅವುಗಳೊಂದಿಗೆ ಸಂಬಂಧ ಬೆಳೆಸುವುದು, ಅವಕಾಶಗಳನ್ನು ತೆಗೆದುಕೊಳ್ಳುವುದು ನಮಗಿಷ್ಟವಿಲ್ಲ. ಹೀಗಾಗಿ ಕಠಿಣ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದು ಶ್ವೇತಭವನದ ಅಧಿಕಾರಿಗಳು ಹೇಳಿದ್ದಾರೆ.
ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತಾವಧಿಯಲ್ಲಿ ಪಾಕಿಸ್ಥಾನವನ್ನು ಭಯೋತ್ಪಾದಕ ಬೆದರಿಕೆಯುಳ್ಳ ರಾಷ್ಟ್ರವೆಂದು ಬಹಿರಂಗವಾಗಿ ಹೇಳಲಾಗಿದೆ. ಭವಿಷ್ಯದಲ್ಲಿ ಪಾಕಿಸ್ಥಾನದ ಪ್ರಜೆಗಳ ಮೇಲೂ ನಿರ್ಬಂಧ ಹೇರುವ ಸಾಧ್ಯತೆಗಳಿವೆ ಎಂಬುದನ್ನು ಶ್ವೇತಭವನ ಸುಳಿವು ನೀಡಿದಂತಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.