ನವದೆಹಲಿ: ರೈಲ್ವೆ ಸಚಿವಾಲಯ ನಗದು ರಹಿತ ವ್ಯವಹಾರವನ್ನು ಪ್ರೋತ್ಸಾಹಿಸಲು ದೇಶದಾದ್ಯಂತ ಎಲ್ಲ ಮೀಸಲು ಟಿಕೆಟ್ ಮಾರಾಟ ಕೌಂಟರ್ಗಳಲ್ಲಿ ಸುಮಾರು 10 ಸಾವಿರ ಪಾಯಿಂಟ್ ಆಫ್ ಸೇಲ್ (ಪಿಒಎಸ್) ಯಂತ್ರಗಳನ್ನು ಅಳವಡಿಸಲು ಮುಂದಾಗಿದೆ. ಅದರಂತೆ ಪಿಒಎಸ್ ಯಂತ್ರದ ಮೂಲಕ ಬುಕ್ ಮಾಡಲಾದ ಟಿಕೆಟ್ಗಳನ್ನು ರದ್ದು ಮಾಡಲು ಅವಕಾಶ ಕಲ್ಪಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ.
ಪಿಒಎಸ್ ಯಂತ್ರ ಲಭ್ಯವಿರುವ ಟಿಕೆಟ್ ಕೌಂಟರ್ಗಳಲ್ಲಿ ಎಸ್ಬಿಐ ಪಿಒಎಸ್ ಯಂತ್ರಗಳ ಮೂಲಕ ಗ್ರಾಹಕರು ಟಿಕೆಟ್ ಬುಕಿಂಗ್ ಮಾಡಿದಲ್ಲಿ ಅವರು ಕೌಂಟರ್ನಲ್ಲಿ ಮತ್ತೆ ತಮ್ಮ ಡೆಬಿಟ್/ಕ್ರೆಡಿಟ್ ಕಾರ್ಡ್ ಸ್ವೈಪ್ ಮಾಡುವ ಅಗತ್ಯವಿಲ್ಲ. 7 ದಿನಗಳಲ್ಲಿ ರದ್ದತಿಯ ಮರುಪಾತಿ ಮೊತ್ತ ಗ್ರಾಹಕರ ಬ್ಯಾಂಕ್ ಖಾತೆಗೆ ನೇರವಾಗಿ ಜಮೆಯಾಗಲಿದೆ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದಲ್ಲಿ.
ಆದರೆ ಒಂದು ವೇಳೆ ಗ್ರಾಹಕರು ಎಸ್ಬಿಐ ರಹಿತ ಪಿಒಎಸ್ ಯಂತ್ರಗಳಿಂದ ಟಿಕೆಟ್ ಬುಕಿಂಗ್ ಮಾಡಿದಲ್ಲಿ, ಟಿಕೆಟ್ ರದ್ದತಿ ವೇಳೆ ಅವರು ತಮ್ಮ ಡೆಬಿಟ್/ಕ್ರೆಡಿಟ್ ಕಾರ್ಡ್ ಸ್ವೈಪ್ ಮಾಡುವ ಅವಶ್ಯಕತೆ ಇದೆ. ಅನಂತರ ಅವರ ಖಾತೆಗೆ ಮರುಪಾವತಿ ಮೊತ್ತ ಜಮೆಯಾಗಲಿದೆ ಎಂದು ಸಚಿವಾಲಯ ತಿಳಿಸಿದೆ.
ಐಆರ್ಸಿಟಿಸಿ ಪಿಒಎಸ್ ಮೂಲಕ ಇ-ಟಿಕೆಟ್ ಬುಕಿಂಗ್ ಮಾಡಿದ ಗ್ರಾಹಕರು ಐಆರ್ಸಿಟಿಸಿ ಜೊತೆ ಸಹಕರಿಸಬೇಕು ಎಂದು ಸಚಿವಾಲಯ ಮನವಿ ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.