ಡೆನ್ಮಾಕ್: ನ್ಯಾಟೊ (ನಾರ್ತ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಶನ್) ಸದಸ್ಯತ್ವ ಹೊಂದಿರುವ ಡೆನ್ಮಾರ್ಕ್ ಇಸಿಸ್ ವಿರುದ್ಧ ಹೋರಾಡಲು ಯು.ಎಸ್ ನೇತೃತ್ವದ ಒಕ್ಕೂಟದ ಭಾಗವೇ ಆಗಿದೆ. ಆದರೆ, ಇದೀಗ ಒಕ್ಕೂಟದ ಮನವಿ ಮೇರೆಗೆ ಡ್ಯಾನಿಷ್ ಸಂಸತ್ತು , ಯುದ್ಧದಿಂದ ಹಾನಿಗೊಳಗಾದ ನೆರೆಯ ದೇಶಕ್ಕೆ ಇನ್ನಷ್ಟು ವಿಶೇಷ ಪಡೆಯನ್ನು ಒದಗಿಸಿದೆ.
ದೇಶದ ಸಮಗ್ರತೆ, ಭದ್ರತೆಯ ದೃಷ್ಟಿಯಿಂದ ಐಸಿಲ್ (Islamic State of Iraq and the Levant) ವಿರುದ್ಧದ ಹೋರಾಟ ಸರ್ಕಾರದ ಆದ್ಯತೆ ಎಂದು ಡ್ಯಾನಿಷ್ ವಿದೇಶಾಂಗ ಸಚಿವ ಆಂಡರ್ಸ್ ಸ್ಯಾಮುಯೆಲ್ಸ್ನ್ ಪಬ್ಲಿಕ್ ಬ್ರಾಡಕಾಸ್ಟರ್ ಟಿವಿ-2 ಕ್ಕೆ ಹೇಳಿದ್ದಾರೆ.
ಯುಎಸ್ನೊಂದಿಗಿನ ಒಕ್ಕೂಟಕ್ಕೆ ಈಗಾಗಲೇ 60 ವಿಶೇಷ ಪಡೆಗಳನ್ನು ಒಳಗೊಂಡಂತೆ, 400 ಸೇನಾ ಸಿಬ್ಬಂದಿಯನ್ನು ಕೊಟ್ಟಿದೆ. ಎಫ್-6 ಜೆಟ್ಸ್ ಮತ್ತು ಸಿ-13 ಓಜೆ ಸಾರಿಗೆ ವಿಮಾನಗಳನ್ನೂ ಒದಗಿಸಿದೆ.
ಡ್ಯಾನಿಷ್ ಅಧಿಕಾರಿಗಳು ಇಸಿಸ್ ಚಟುವಟಿಕೆಗಳ ಮೇಲೆ ನಿಗಾ ಇಟ್ಟಿದ್ದು, ಇಸಿಸ್ಗೆ ಬೆಂಬಲಿಸುವ ದೇಶದೊಳಗಿನ ಶಂಕಿತರನ್ನೂ ಬಂಧಿಸಿ ವಿಚಾರಿಸುತ್ತಿದ್ದಾರೆ. ಕಳೆದ ಏಪ್ರಿಲ್ನಲ್ಲಿ ಶಂಕಿತ ಇಸಿಸ್ನ ನಾಲ್ವರನ್ನು ಬಂಧಿಸಿದ ಭದ್ರತಾ ಪಡೆ, ಅಕ್ರಮ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿತ್ತು.
2015 ರಲ್ಲಿ ಡ್ಯಾನಿಷ್ನ 125 ಜನ ಇಸಿಸ್ ಸೇರಲು ಇರಾಕ್ ಮತ್ತು ಇರಾನ್ಗೆ ಹೋಗಿದ್ದರು. ಅದರಲ್ಲಿ ಇಸಿಸ್ ಪರ ಹೋರಾಡುವಾಗ 27 ಜನ ಮೃತರಾಗಿದ್ದಾರೆ ಎಂದು ಡೆನ್ಮಾರ್ಕ್ನ ಭದ್ರತಾ ಹಾಗೂ ಗುಪ್ತಚರ ಇಲಾಖೆ PET (Politiets Efterretningstjeneste) ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.