ವಾಷಿಂಗ್ಟನ್: ಅಮೇರಿಕಾದ 45ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಶುಕ್ರವಾರ ಪ್ರಮಾಣವಚನ ಸ್ವೀಕರಿಸಿದರು.
ವಾಷಿಂಗ್ಟನ್ನಲ್ಲಿ ಅಮೇರಿಕಾ ಕಾಲಮಾನ ಬೆಳಗ್ಗೆ 11.30 (ಭಾರತೀಯ ಕಾಲಮಾನ ರಾತ್ರಿ 10.30)ಕ್ಕೆ ಡೊನಾಲ್ಡ್ ಟ್ರಂಪ್ ಅವರು ಪ್ರಮಾಣವಚನ ಸ್ವೀಕರಿಸಿದ್ದು, ಅಮೇರಿಕಾ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಜಾನ್ ರಾಬರ್ಟ್ಸ್ ಟ್ರಂಪ್ ಅವರಿಗೆ ಪ್ರಮಾಣವಚನ ಬೋಧಿಸಿದರು.
ಇದೇ ವೇಳೆ ಅಮೇರಿಕಾದ ನಿಯೋಜಿತ ಉಪಾಧ್ಯಕ್ಷ ಮೈಕ್ ಪೆನ್ಸ್ ಕೂಡ ಪ್ರಮಾಣವಚನ ಸ್ವೀಕರಿಸಿದರು.
ಪ್ರಮಾಣವಚನ ಸ್ವೀಕರಿಸಿದ ನಂತರ ನ್ಯಾಶನಲ್ ಮಾಲ್ ಮೈದಾನದಲ್ಲಿ ಜನತೆಯನ್ನುದ್ದೇಶಿಸಿ ಮಾತನಾಡಿದ ಡೊನಾಲ್ಡ್ ಟ್ರಂಪ್ ‘ಅಮೇರಿಕಾ ಫರ್ಸ್ಟ್’, ಅಮೇರಿಕಾದ ಜನತೆ ಮೊದಲು ಎಂಬ ಧ್ಯೇಯದೊಂದಿಗೆ ಆಡಳಿತ ನಡೆಸುವುದಾಗಿ ಭರವಸೆ ನೀಡಿದರು.
ಅಮೇರಿಕಾದ ನಾಗರಿಕರಾದ ನಾವು ದೇಶದ ಪುನಾರಚನೆ ಹಾಗೂ ಜನತೆ ನೀಡಿರುವ ಭರವಸೆಗಳನ್ನು ಪುನಃಸ್ಥಾಪಿಸಲು ಒಂದು ಬೃಹತ್ ರಾಷ್ಟ್ರೀಯ ಪ್ರಯತ್ನದಲ್ಲಿ ಇಲ್ಲಿ ಸೇರಿಕೊಂಡಿದ್ದೇವೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದರು.
ಇಂದಿನ ಸಮಾರಂಭ ಒಂದು ಬಹಳ ವಿಶೇಷ ಅರ್ಥವನ್ನು ಹೊಂದಿದೆ. ಏಕೆಂದರೆ ಇಂದು ನಾವು ಕೇವಲ ಒಂದು ಆಡಳಿತ ವ್ಯಕ್ತಿಯಿಂದ ಮತ್ತೊಬ್ಬರಿಗೆ ಅಥವಾ ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಅಧಿಕಾರ ವರ್ಗಾಯಿಸುತ್ತಿಲ್ಲ, ಆದರೆ ವಾಷಿಂಗ್ಟನ್, ಡಿ.ಸಿ.ಯಿಂದ ಅಧಿಕಾರವನ್ನು ಮರಳಿ ಅಮೇರಿಕಾದ ಜನರಿಗೆ ವರ್ಗಾಯಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
ಟ್ರಂಪ್ ಅವರನ್ನು ಅಭಿನಂದಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತ-ಅಮೇರಿಕಾ ನಡುವಿನ ಸಂಬಂಧಗಳನ್ನು ಇನ್ನಷ್ಟು ಬಲಪಡಿಸಲು ಡೊನಾಲ್ಡ್ ಟ್ರಂಪ್ ಜೊತೆ ಕಾರ್ಯ ನಿರ್ವಹಿಸುವುದಾಗಿ ಹಾಗೂ ಸಂಪೂರ್ಣ ಸಹಕಾರ ಪಡೆಯುವುದನ್ನು ಮುಂದೆ ನೋಡುತ್ತಿರುವುದಾಗಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.