ವಾಷಿಂಗ್ಟನ್: ಭಾರತ ಹಾಗೂ ಅಮೆರಿಕೆಯ ಸಂಬಂಧ ವೃದ್ಧಿಗೆ ಬೆಂಬಲ ಹಾಗೂ ಸಹಕರಿಸಿದ್ದಕ್ಕಾಗಿ ಪ್ರಧಾನಿ ಮೋದಿಯವರಿಗೆ ಅಮೆರಿಕೆಯ ನಿಕಟಪೂರ್ವ ಅಧ್ಯಕ್ಷ ಬರಾಕ್ ಒಬಾಮ ದೂರವಾಣಿ ಮೂಲಕ ಥ್ಯಾಂಕ್ಸ್ ಹೇಳಿದ್ದಾರೆ.
ಒಬಾಮ ಹಾಗೂ ಪ್ರಧಾನಿ ಮೋದಿ ಅವರು ದೂರವಾಣಿ ಸಂಭಾಷಣೆಯಲ್ಲಿ, ಭಾರತ ಹಾಗೂ ಅಮೆರಿಕೆಯ ನಡುವಣ ವೃದ್ಧಿಸಿದ ಪ್ರಗತಿ ಹಾಗೂ ಪರಸ್ಪರ ಸಹಕರಿಸಿದ ಕುರಿತು ಅವಲೋಕಿಸಿದರು.
ಒಬಾಮ ಅವರ ತೀವ್ರ ಬೆಂಬಲ ಹಾಗೂ ಭಾರತದೊಂದಿಗಿನ ಕೊಡುಗೆಯನ್ನು ಸ್ಮರಿಸಿದ ಪ್ರಧಾನಿ ಮೋದಿ ಅವರು, ಒಬಾಮ ಅವರ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಆಶೀಸಿದ್ದಾಗಿ ಕಚೇರಿ ಮೂಲಗಳು ತಿಳಿಸಿವೆ.
2014ರ ಚುನಾವಣೆಯಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸಿದ ತಕ್ಷಣ ಮೋದಿಯವರಿಗೆ ಮೊಟ್ಟ ಮೊದಲು ಕರೆ ಮಾಡಿ ಅಭಿನಂದಿಸಿದ್ದು ಒಬಾಮ. ಜೊತೆಗೆ ವೈಟ್ ಹೌಸ್ಗೆ ಆಗಲೇ ಆಹ್ವಾನವನ್ನು ನೀಡಿದ್ದು ವಿಶೇಷ.
ನಂತರದ ದಿನಗಳಲ್ಲಿ ಒಟ್ಟು 8 ಬಾರಿ ಈ ಇಬ್ಬರು ಪರಸ್ಪರ ಸಂಧಿಸಿದ್ದು ಭಾರತ-ಅಮೆರಿಕದ ನಾಯಕರ ಭೇಟಿ ಕುರಿತಂತೆ ಇದು ದಾಖಲೆಯೂ ಹೌದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.