ಪುರಿ: ಪುರಿ ಬೀಚ್ ಉತ್ಸವವು ಪುರಿ ಸೀ ಬೀಚ್ನಲ್ಲಿ ಜನವರಿ 20ರಿಂದ 26ರ ವರೆಗೆ ನಡೆಯಲಿದೆ. ಒಡಿಸಾ ರಾಜ್ಯ ಸರ್ಕಾರ ಮೊದಲ ಬಾರಿಗೆ ಪುರಿ ಬೀಚ್ ಉತ್ಸವ ಆಯೋಜಿಸುತ್ತಿದ್ದು, ಜನರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುವ ನಿರೀಕ್ಷೆ ಇದೆ.
ಈ ಉತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ವರ್ಣಮಯ, ಸಂತೋಷದಾಯಕ ಕ್ಷಣಗಳ ಎಲ್ಲ ಅಂಶಗಳ ಸಮ್ಮಿಲನವಾಗಲಿದೆ.
ಬಾಲಿವುಡ್ನ ಅತ್ಯುತ್ತಮ ಗಾಯಕರು, ಶಿಗ್ಮೋ ಮೆರವಣಿಗೆ, ಸಾಂಬಾ ನೃತ್ಯ, ರೋಲರ್ ಸ್ಕೇಟಿಂಗ್, ಲೇಸರ್ ಪ್ರದರ್ಶನ, ಸರ್ಫಿಂಗ್, ಪ್ಯಾರಾ ಸೇಯ್ಲಿಂಗ್, ಬೀಚ್ ಕ್ಯಾಂಪಿಂಗ್, ಯೋಗ ಕಾರ್ಯಕ್ರಮ, ಫ್ಯಾಶನ್ ಶೋ, ಬೀಚ್ ವಾಲಿಬಾಲ್, ಪಾರ್ಟಿ ಮಾಸ್ಕ್ ಮತ್ತಿತರ ಜೀವನ ಪರ್ಯಂತ ನೆನಪಿಡಬಲ್ಲ ಅಭೂತಪೂರ್ವ ಕಾರ್ಯಕ್ರಮಗಳು ನಡೆಯಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.