ನವದೆಹಲಿ: ಟೆಲಿಕಾಂ ನಿರ್ವಾಹಕರ ನಡುವೆ 4G ಗ್ರಾಹಕರನ್ನು ಹೊಂದುವ ಸಮರ ಮುಂದುವರೆದಿದ್ದು, ಭಾರತದ ಎರಡನೇ ಅತಿ ದೊಡ್ಡ ಟೆಲಿಕಾಮ ಕಂಪೆನಿ ವೊಡಾಫೋನ್ ೨೦೦ ಮಿಲಿಯನ್ ಗ್ರಾಹಕರನ್ನು ಪಡೆದ ಮೈಲಿಗಲ್ಲು ಆಚರಿಸಲು 4 G ಗ್ರಾಹಕರಿಗೆ 4 ಪಟ್ಟು ಹೆಚ್ಚು 4G ಡಾಟಾ ಘೋಷಿಸಿದೆ.
ಅದರಂತೆ 250 ರೂ. 1GB ಡಾಟಾ ಪ್ಯಾಕ್ ಖರೀದಿಸಿದ ಗ್ರಾಹಕರು 28 ದಿನಗಳ 4G ಡಾಟಾ ಪಡೆಯಲಿದ್ದಾರೆ. ಅಲ್ಲದೇ ರೂ. 999ರ ಡಾಟಾ ಪ್ಯಾಕ್ ಖರೀದಿಸಿದ ಗ್ರಾಹಕರು ಈ ಹಿಂದಿನ 10 GB ಬದಲು 22 GB, 4G ಡಾಟಾ ಪಡೆಯಲಿದ್ದಾರೆ.
ವೊಡಾಫೋನ್ ಗ್ರಾಹಕರು ಆನ್ಲೈನ್ ಮೂಲಕ ಹೆಚ್ಚಿನ ಕಂಟೆಂಟ್ ಮತ್ತು ವೀಡಿಯೋಗಳನ್ನು ಪಡೆಯುತ್ತಿದ್ದು, 17 ವಲಯಗಳ 4G ಗ್ರಾಹಕರು ವೊಡಾಫೋನ್ ಸೂಪರ್ನೆಟ್ 4G ಮೂಲಕ ಹೆಚ್ಚಿನ ಇಂಟರ್ನೆಟ್ ಸೌಲಭ್ಯವನ್ನು ಆನಂದಿಸಬಹುದು ಎಂದು ವೊಡಾಫೋನ್ ಇಂಡಿಯಾದ ಮುಖ್ಯ ವಾಣಿಜ್ಯ ಅಧಿಕಾರಿ ಸಂದೀಪ್ ಕಟಾರಿಯಾ ಹೇಳಿದ್ದಾರೆ.
ವೊಡಾಫೋನ್ ತನ್ನ ಗ್ರಾಹಕರಿಗೆ ಇತ್ತೀಚೆಗೆ ಸೂಪರ್ನೆಟ್ 4G ಅಲ್ಲದೇ 16 ರೂ. ಪ್ಯಾಕ್ನ 1 ತಾಸಿನ ಅನಿಯಮಿತ 3G ಮತ್ತು 4G ಸೂಪರ್ ಅವರ್ ಯೋಜನೆಯನ್ನು ಬಿಡುಗಡೆ ಮಾಡಿತ್ತು. ವೊಡಾಫೋನ್ ರೂ.7ರ ವೊಡಫೋನ್-ವೊಡಾಫೋನ್, 1 ತಾಸು ಅನಿಯಮಿತ ಕಾಲಿಂಗ್ ಆಫರ್ನ್ನು ಕೂಡ ನೀಡುತ್ತಿದೆ.
ಕಳೆದ ವಾರ ಐಡಿಯಾ ತನ್ನ 4G ಪ್ರೀಪೇಯ್ಡ್ ಗ್ರಾಹಕರಿಗೆ ರೂ. 348 ಡಾಟಾ ಪ್ಯಾಕ್ ಜೊತೆ 1 GB ಉಚಿತ 4 G ಡಾಟಾ ಹಾಗೂ ಅನಿಯಮಿತ ವಾಯ್ಸ್ ಕಾಲಿಂಗ್ ಮತ್ತು ಎಸ್ಎಂಎಸ್ ಘೋಷಿಸಿತ್ತು.
ಏರ್ಟೆಲ್ ಕೂಡ ತನ್ನ ನಿರ್ದಿಷ್ಟ 4G ಪ್ರೀಪೇಯ್ಡ್ ಮತ್ತು ಪೋಸ್ಟ್ಪೇಯ್ಡ್ ಗ್ರಾಹಕರಿಗೆ ಡಿ.31, 2017ರ ವರೆಗೆ ಉಚಿತ 3GB ಡಾಟಾ ಘೋಷಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.